VIDEO| ದಾಖಲೆ ಬರೆಯುವ ಆಸೆಗೆ ಮೂಕ ಪ್ರಾಣಿಗಳಿಗೆ ಶಿಕ್ಷೆ: ಯುವಕರ ಹುಚ್ಚಾಟಕ್ಕೆ ಭಾರಿ ಆಕ್ರೋಶ

Mandya youngsters
Published on

ಮಂಡ್ಯ: ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಮೂಕ ಪ್ರಾಣಿಗಳನ್ನು ಮನಬಂದಂತೆ ನಡೆಸಿಕೊಳ್ಳುವುದು ಮಾನವೀಯತೆಗೆ ಕೊಡಲಿ ಪೆಟ್ಟು ಹಾಕಿದಂತೆ. ಮೂಕರೋಧನೆ ಅರಿಯದೇ ಆನಂದ ಪಡುವ ಅನಾಗರಿಕರಿಗೆ ಕಾಲವೇ ಉತ್ತರ ನೀಡಬೇಕಿದೆ.

ಹೌದು, ದಾಖಲೆ ಬರೆಯುವ ಆಸೆಗೆ ಬಿದ್ದ ಯುವಕರು ಎತ್ತುಗಳ ಕೈಯಲ್ಲಿ ಸಾಮಾರ್ಥ್ಯಕ್ಕಿಂತ ಹೆಚ್ಚಿನ ಕಬ್ಬಿನ ರಾಶಿಯನ್ನು ಹೊರಿಸುವ ಮೂಲಕ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಂಡ್ಯದ ಎಚ್​. ಮಲ್ಲಿಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಬರೋಬ್ಬರಿ 14.55 ಟನ್​ ಕಬ್ಬಿನ ರಾಶಿಯನ್ನು ಎತ್ತಿನಗಾಡಿಗೆ ತುಂಬಿ ಸುಮಾರು 3 ಕಿ.ಮೀ ವರೆಗೆ ಮೂಕ ಪ್ರಾಣಿಗಳ ಕೈಯಲ್ಲಿ ಬಲವಂತವಾಗಿ ಎಳೆಸಿ, ಕ್ರೌರ್ಯ ಮೆರೆದಿದ್ದಾರೆ.

ಸಾಮಾನ್ಯವಾಗಿ ಎತ್ತಿನ ಗಾಡಿಗಳಲ್ಲಿ 5 ರಿಂದ 8 ಟನ್​ ಮಾತ್ರ ತುಂಬುತ್ತಾರೆ. ಆದರೆ, ದಾಖಲೆ ಬರೆಯುವ ಆಸೆಗೆ ಬಿದ್ದು, ಪ್ರಾಣಿಗಳ ಕಷ್ಟವನ್ನು ಅರಿಯದೇ ಭಾರಿ ಪ್ರಮಾಣದ ಕಬ್ಬಿನ ರಾಶಿಯನ್ನು ಎಳೆಸಿರುವುದು ರೈತರ ಮಕ್ಕಳಾಗಿ ತಲೆ ತಗ್ಗಿಸುವಂತ ವಿಚಾರವಾಗಿದೆ. ಯುವಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net