ಮಹಿಳೆಯ ಮೇಲೆ PSI ಹಲ್ಲೆ ಪ್ರಕರಣ: ಮಂಡ್ಯದ ಪೂರ್ವ ಠಾಣೆ ಪಿಎಸ್ಐ ಅಯ್ಯನಗೌಡ ಅಮಾನತು

suspend
Published on

ಮಂಡ್ಯ: ಮಹಿಳೆಯ ಮೇಲೆ ಪಿಎಸ್​​ಐ ಹಲ್ಲೆ ವಿಚಾರ ಸಂಬಂಧ ಮಂಡ್ಯದ ಪೂರ್ವ ಠಾಣೆ ಪಿಎಸ್ಐ ಅಯ್ಯನಗೌಡ ಅವರನ್ನು ಅಮಾನತುಗೊಳಿಸಿ ಮಂಡ್ಯ ಎಸ್ಪಿ ಯತೀಶ್ ಆದೇಶ ಹೊರಡಿಸಿದ್ದಾರೆ.

ನಿನ್ನೆ (ಫೆ.13) ಸಂಜೆ ಠಾಣೆಗೆ ಮಹಿಳೆಯನ್ನ ಕರೆಸಿ ಪಿಎಸ್ಐ ಹಲ್ಲೆ ಮಾಡಿದ್ದರು. ಮಂಡ್ಯದ ಅಶೋಕ್ ನಗರ ನಿವಾಸಿ ರೂಪದೇವಿಯನ್ನು ಜೀಪ್‌ನಲ್ಲಿ ಠಾಣೆಗೆ ಕರೆದುಕೊಂಡು ಬಂದು ಮನಸ್ಸೊಇಚ್ಚೆ ಹಲ್ಲೆ ನಡೆಸಲಾಗಿತ್ತು.

ಹಸುಗಳನ್ನ ರಸ್ತೆಗೆ ಕಟ್ಟುತ್ತಾರೆ ಎಂದು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ಪಿಎಸ್​​​ಐ ವಿರುದ್ಧ ಮಹಿಳೆಯ ತಾಯಿ ದೂರು ನೀಡಿದ್ದರು. ಗೌರಮ್ಮಳ ದೂರಿನ ಅನ್ವಯ ಪಿಎಸ್ ಐ ವಿರುದ್ಧ ಪೂರ್ವ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಅನ್ವಯ ಇದೀಗ ಪಿಎಸ್ಐ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net