ಮಂಡ್ಯ ಸಂಚಾರ ಪೊಲೀಸ್​ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ ಮಾಡಿದ ಸಿಬ್ಬಂದಿ

mandya feb 10 2020
Published on

ಮಂಡ್ಯ: ಮಹಿಳಾ ಪೇದೆಗೆ ಸೀಮಂತ ಮಾಡಿದ ವಿನೂತನ ಕಾರ್ಯಕ್ರಮಕ್ಕೆ ನಗರ ಸಂಚಾರ ಪೊಲೀಸ್​ ಠಾಣೆ ಸಾಕ್ಷಿಯಾಯಿತು.

ಪೇದೆ ಪಲ್ಲವಿಗೆ ಸಂಚಾರ ಪೊಲೀಸ್​ ಠಾಣೆ ಸಿಬ್ಬಂದಿ ಸೀಮಂತ ಮಾಡಿದರು. ಚೊಚ್ಚಲ ಹೆರಿಗೆಗೆ ತೆರಳುತ್ತಿರುವ ಅವರಿಗೆ 6 ತಿಂಗಳು ರಜೆ ನೀಡಿ. ರೇಷ್ಮೆ ಸೀರೆ ತೊಡಿಸಿ, ಉಡುಗೊರೆ ನೀಡಿ ಸಿಬ್ಬಂದಿ ಹರಸಿ ಕಳುಹಿಸಿಕೊಟ್ಟರು.

ಪೊಲೀಸ್​ ಠಾಣೆಗಳಲ್ಲಿ ಕೆಲಸದ ಒತ್ತಡ ಅಧಿಕವಾಗಿರುವುದರಿಂದ ಈ ರೀತಿಯ ಕಾರ್ಯಕ್ರಮಗಳು ನಡೆಯುವುದು ವಿರಳ. ಹೀಗಾಗಿ ಮಂಡ್ಯ ಸಂಚಾರ ಪೊಲೀಸ್​ ಠಾಣೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಸೀಮಂತ ಕಾರ್ಯಕ್ರಮದಲ್ಲಿ ಪೇದೆ ಪಲ್ಲವಿ ಅವರ ಕುಟುಂಬ ಸದಸ್ಯರು ಇದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net