

ಮಂಡ್ಯ: ಸಮಾಜಕ್ಕೆ ಹೊರೆಯಾಗಿ ಬದುಕುವವರ ನಡುವೆ ಅಂಧರು ಯಾವುದೇ ಅನುಕಂಪ ಬಯಸದೆ ಸಾಮಾನ್ಯರಿಗಿಂತ ಉತ್ತಮವಾಗಿ ಬದುಕುತ್ತಿರುವುದು ಶ್ಲಾಘನೀಯ ಎಂದು ಬಿಜೆಪಿ ಮುಖಂಡ ಎಚ್.ಆರ್. ಹೇಳಿದರು.
ಅಖಿಲ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆ, ಸ್ನೇಹ ಚಾರಿಟಬಲ್ ಟ್ರಸ್ಟ್ ವತಿಯಿಂದ ಲೂಯಿಬ್ರೈಲ್ ಜನ್ಮದಿನಾಚರಣೆ ಅಂಗವಾಗಿ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಂಧ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಕೈಗಡಿಯಾರ, ವಾಕಿಂಗ್ ಸ್ಟಿಕ್ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಅಮೆರಿಕದ ಲೇಖಕಿ ಹೆಲನ್ ಕೆಲ್ಲರ್, 43ನೇ ವಯಸ್ಸಿನಲ್ಲಿ ಅಂಧನಾದ ಕವಿ ಜಾನ್ ಮಿಲ್ಟನ್, ಕಾರ್ಟೂನಿಸ್ಟ್ ಜೆಮ್ಸ್ ಟರ್ಬರ್, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪುಟ್ಟರಾಜ ಗವಾಯಿ ಈ ಎಲ್ಲ ಮಹನೀಯರ ಸಾಧನೆ ಅಮೋಘವಾದುದು. ಅಂಧರ ಬದುಕಿಗೆ ಸಾಕಷ್ಟು ಅನುಕೂಲ ಕಲ್ಪಿಸುವ ಸಾಧನ ಕಂಡುಹಿಡಿದ ಲೂಯಿ ಬ್ರೈಲ್ ಅಂಧರ ಪಾಲಿನ ದೈವ ಎಂದು ಬಣ್ಣಿಸಿದರು.
ಗ್ರಾಹಕರ ಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಎಸ್. ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬೇಲೂರು ಗ್ರಾಪಂ ಅಧ್ಯಕ್ಷ ಸಂಜು, ಬಿ.ಎಂ. ಅಪ್ಪಾಜಪ್ಪ, ಹೆಮ್ಮಿಗೆ ಚಂದ್ರಶೇಖರ್, ಅಶ್ವಿನಿ ಅಜಯ್‌ಕುಮಾರ್, ಸಿ.ಎಂ. ಸಿದ್ದರಾಮೇಗೌಡ, ಎನ್.ಎಸ್. ಮಂಜುನಾಥ್, ಲೋಕೇಶ್, ಎಂ. ಮಹೇಶ, ಎಂ.ಸಿ. ನಿತ್ಯಾನಂದ ಇತರರಿದ್ದರು.