

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಅಧಿಕಾರ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಿಡಿಕಾರಿದೆ.
ಮೈಷುಗರ್ ಕಾರ್ಖಾನೆಯನ್ನು ದಿ.ಅಂಬರೀಷ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ನಟಿಸುತ್ತಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣಕ್ಕೆಂದು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಮೈಷುಗರ್ ಕಾರ್ಖಾನೆ ತನ್ನ ಖಾಸಗಿ ಆಸ್ತಿ ಎಂಬಂತೆ ಸಂಸದೆ ವರ್ತಿಸುತ್ತಿದ್ದಾರೆ. ಈ ನಡೆ ಖಂಡನೀಯ. ಅದು ಜಿಲ್ಲೆಯ ಆಸ್ತಿ ಎಂಬುದನ್ನು ಸಂಸದರು ಅರಿಯಬೇಕು ಎಂದಿದೆ. ಇದನ್ನೂ ಓದಿರಿ ಪ್ಲೀಸ್ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಸುಮಲತಾ ಅವರು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಮಗನ ಚಿತ್ರಕ್ಕೆ ಕಾರ್ಖಾನೆ ಬಳಸಿಕೊಳ್ಳುತ್ತಿರುವುದು ಖಂಡನೀಯ. ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಹೋರಾಟ ನಡೆಯುತ್ತಿದೆ. ಈ ನಡುವೆ ಕಾರ್ಖಾನೆಯನ್ನು ಆಕ್ರಮಣ ಮಾಡಿಕೊಂಡಿದ್ದೇವೆ ಎಂಬ ಸಂದೇಶ ಸಾರುವ ರೀತಿಯ ವರ್ತನೆ ತೋರಿಸುತ್ತಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ಸಮಿತಿಯು ಟೀಕಿಸಿದೆ.
ಕಾರ್ಖಾನೆ ಮತ್ತು ಅದರ ಆಸ್ತಿಯನ್ನು ಖಾಸಗಿ ಲಾಬಿಗಳಿಗೆ ಅರ್ಪಿಸಲು ಸಂಸತ್ ಸದಸ್ಯತ್ವ ಬಳಸುತ್ತಿದ್ದಾರೆ. ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಪ್ರಾರಂಭಿಸುತ್ತೇವೆ ಎಂದು ಹೇಳುತ್ತಲೇ 40 ವರ್ಷ ರೈತರಿಗೆ ಶಾಶ್ವತವಾಗಿ ಅನ್ಯಾಯ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿರಿ ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
ಸಿನಿಮಾ ಚಿತ್ರೀಕರಣ ಸಂಬಂಧ ಜಿಲ್ಲಾಡಳಿತ ತನಿಖೆ ಮಾಡಬೇಕು. ಸಂಸತ್ನಲ್ಲಿ ರೈತ ವಿರೋಧಿ ಕಾಯ್ದೆ ಮಂಡನೆ ಸಂದರ್ಭದಲ್ಲಿ ಸಂಸದೆ ಅವರ ನಿಲುವಿನ ಉತ್ತರವನ್ನು ಮಂಡ್ಯ ಜಿಲ್ಲೆಯ ರೈತರಿಗೆ ನೀಡಬೇಕು. ಕಾರ್ಖಾನೆಗೆ ಯಾವುದೇ ರೀತಿಯ "ಖಾಸಗಿ'' ಪ್ರವೇಶಿಸಲು ಜನರು ಅವಕಾಶ ಕೊಡದೆ ಹೋರಾಟಕ್ಕೆ ಬೆಂಬಲಿಸಬೇಕೆಂದು ಸಮಿತಿಯ ಅಧ್ಯಕ್ಷ ಡಾ.ಜಿ.ಮಾದೇಗೌಡ, ಸುನಂದಾ ಜಯರಾಂ, ಎಂ.ಬಿ. ಶ್ರೀನಿವಾಸ್, ಸಿ.ಕುಮಾರಿ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕೃಷ್ಣ ಪ್ರಕಾಶ್ ಒತ್ತಾಯಿಸಿದ್ದಾರೆ.