

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಬಿ.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಜಿ.ಪಿ.ಭಾಸ್ಕರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಇಬ್ಬರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಡಿ.ಆಶಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಜಿ.ಬಿ.ಚಂದ್ರಶೇಖರ್ ಮಾತನಾಡಿ, ಹಾಲು ಉತ್ಪಾದಕರಿಗೆ ಸರ್ಕಾರ ಹಾಗೂ ಜಿಲ್ಲಾ ಹಾಲು ಒಕ್ಕೂಟ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಂಘದ ಸಮಗ್ರ ಅಭಿವೃದ್ಧಿಗೆ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಸಂಘದ ನಿರ್ದೇಶಕರಾದ ಜಿ.ಆರ್.ಚಂದ್ರಶೇಖರ್, ಜಿ.ಇ.ವೀರೇಶ್, ಜಿ.ಇ.ನಾಗಣ್ಣ, ಜಿ.ಡಿ.ನರಸಿಂಹ, ಜಿ.ವಿ.ದೇವೇಶ್, ನಿಂಗಪ್ಪಾಜಿ, ಜಯಶೀಲ, ಬಿ.ಎಸ್.ಚನ್ನಪ್ಪ, ಜಿ.ಎಸ್.ಪಾರ್ವತಿ, ನಾಮನಿರ್ದೇಶಿತ ನಿರ್ದೇಶಕ ಜಿ.ಆರ್.ಆದಿಪ್ರಸಾದ್, ಮುಖಂಡರಾದ ಜಿ.ಬಿ.ಕೃಷ್ಣ, ಜಿ.ಪಿ.ಮೋಹನ್, ಜಿ.ಎಸ್.ಅರುಣ್‌ಕುಮಾರ್, ಜಿ.ಇ.ಆತ್ಮಾನಂದ ಇದ್ದರು.