

ಮದ್ದೂರು: ತಾಲೂಕಿನ ಬಿದರಕೋಟೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸುಕನ್ಯಾ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿದ್ದ ಪ್ರೇಮಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸುಕನ್ಯಾ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯೂ ಆದ ತಾ.ಪಂ. ಇ.ಒ. ಮಂಜುನಾಥ್ ಪ್ರಕಟಿಸಿದರು.
ಗ್ರಾ.ಪಂ.ಅಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ಯೋಗೇಶ್, ಮಮತಾ, ವಸಂತ, ಈಶ್ವರಪ್ಪ, ಅಂಬಿಕಾ, ಮನು, ಕೃಷ್ಣ, ನಾಗಮ್ಮ, ಮುಖಂಡರಾದ ಬಿದರಕೋಟೆ ಕುಶ, ಕೃಷ್ಣೇಗೌಡ, ಯೋಗಾನಂದ, ಉಮೇಶ್, ಅರ್ಜುನ್, ಗಿರೀಶ್, ಸ್ವಾಮಿ, ರಾಜು ಇದ್ದರು.