ಕಂಡೋರ ಹೆಂಡತಿಯನ್ನು ಕರೆದೊಯ್ದ ಪೊಲೀಸಪ್ಪ: ಪತ್ನಿಗಾಗಿ ಸಂತ್ರಸ್ತ ಪತಿಯ ಅಳಲು!

Woman Escape
Published on

ಮಂಡ್ಯ: ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ತನ್ನೊಂದಿಗೆ ಕರೆದೊಯ್ದಿರುವ ಆರೋಪ ಪೊಲೀಸ್​ ಕಾನ್ಸ್​ಟೇಬಲ್ ವಿರುದ್ಧ ಕೇಳಿಬಂದಿದೆ. ​

ಹಲಗೂರು ಪೊಲೀಸ್ ಠಾಣೆಯ ಪೇದೆ ಹರೀಶ್ ವಿರುದ್ದ ಪ್ರಕರಣ ದಾಖಲಾಗಿದೆ. ಪತ್ನಿ ಕಳೆದುಕೊಂಡ ಕೊಳ್ಳೆಗಾಲ ತಾಲೂಕಿನ ಮಳ್ಳೂರು ಗ್ರಾಮದ ಸಂತ್ರಸ್ತ ಪತಿ ನಾಗರಾಜು ಮಂಡ್ಯ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ತನ್ನ ಹೆಂಡತಿ ಶಿಲ್ಪಾಳನ್ನು ಪೇದೆ ಹರೀಶ್ ಪುಲಾಯಿಸಿ ಕರೆದುಕೊಂಡು ಹೋಗಿದ್ದಾರೆ. ಆಕೆಗೆ ಬ್ಲಾಕ್​ಮೇಲ್ ಮಾಡಿ ಬಲವಂತವಾಗಿ ತನ್ನೊಂದಿಗೆ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ನಾಗರಾಜು, ಪೇದೆಯಿಂದ ತನ್ನ ಹೆಂಡತಿಯನ್ನ ಬಿಡಿಸಿಕೊಡುವಂತೆ ಮಂಡ್ಯ ಎಸ್ಪಿಗೆ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net