ಸಕ್ಕರೆ ನಾಡಲ್ಲಿ ಗಣರಾಜ್ಯೋತ್ಸವ ರಂಗು

26_01_Mdy_Republic Day 04
Published on

ಮಂಡ್ಯ: ಕೇಸರಿ,ಬಿಳಿ,ಹಸಿರು ತೊಡುಗೆ ತೊಟ್ಟ ಮಕ್ಕಳ ನೃತ್ಯದ ಚಿತ್ತಾರ, ಆಕರ್ಷಕ ಪಥಸಂಚಲನ, ಗಮನಸೆಳೆದ ಟ್ಯಾಬ್ಲೋ, ಉತ್ತಮ ಅಧಿಕಾರಿಗಳಿಗೆ ಸನ್ಮಾನ, ಜಿಲ್ಲೆಯ ಅಭಿವೃದ್ಧಿ ಕುರಿತು ಡಿಸಿ ಭಾಷಣ, ಆಚರಣೆ ವೀಕ್ಷಿಸಿದ ವಿದೇಶಿ ಪ್ರಜೆಗಳು...
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಕಂಡು ಬಂದ ವಿಶೇಷತೆಗಳು.
ಆಕರ್ಷಕ ನೃತ್ಯ, ಗಮನಸೆಳೆದ ಸ್ತಬ್ಧಚಿತ್ರ: ಗಣರಾಜ್ಯೋತ್ಸವ ಸಮಾರಂಭದಲ್ಲಿ ಚಿನ್ಮಯ ಮಹಾವಿದ್ಯಾಲಯದ 350, ಟ್ವಿಂಕಲ್ ಯುನೈಟೆಡ್ ಪಬ್ಲಿಕ್ ಶಾಲೆಯ 250 ಮಕ್ಕಳು, ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ಶಾಲೆಯ ಮಕ್ಕಳ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು.
ಸಮಾರಂಭದಲ್ಲಿ ಭಾಗವಹಿಸಿದ್ದ ಇಲಾಖಾವಾರು ಸ್ತಬ್ಧಚಿತ್ರಗಳ ಪೈಕಿ ನಗರಸಭೆ ರೂಪುಗೊಳಿಸಿದ್ದ ಪ್ರಕೃತಿ ಮಾತೆಯ ಸ್ತಬ್ಧ ಚಿತ್ರ ಗಮನಸೆಳೆಯಿತು. ಪ್ಲಾಸ್ಟಿಕ್ ನಿಷೇಧ ಘೋಷ ವಾಕ್ಯದೊಂದಿಗೆ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಹಸಿರ ಸಿರಿ ಕಂಗೊಳಿಸುವಂತೆ ಚಿತ್ರಿಸಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಪ್ರಕೃತಿ ಮಾತೆಯೊಂದಿಗೆ ವೃಕ್ಷ ಕಲಾಕೃತಿ ಪ್ಲಾಸ್ಟಿಕ್ ಅನ್ನು ನೇಣಿಗೇರಿಸಿದ ಸ್ಥಿತಿಯಲ್ಲಿರಿಸಿ ಚಿತ್ರಿಸಿದ್ದು ಆಕರ್ಷಣೀಯವಾಗಿತ್ತು. ನಗರಸಭೆ ಪೌರಾಯುಕ್ತ ಎಸ್.ಲೋಕೇಶ್ ಕಲ್ಪನೆಯಲ್ಲಿ ಅರಳಿಸಿದ್ದ ಸ್ತಬ್ಧ ಚಿತ್ರ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಉತ್ತಮರಿಗೆ ಸನ್ಮಾನ: ಪಥ ಸಂಚಲನದಲ್ಲಿ 47 ತುಕಡಿಗಳು ಭಾಗವಹಿಸಿದ್ದವು. ಇಲಾಖಾ ತಂಡಗಳಲ್ಲಿ ಅಬಕಾರಿ(ಪ್ರ), ಜಿಲ್ಲಾ ಸಶಸ ಮೀಸಲು ಪಡೆ(ದ್ವಿ), ಗೃಹರಕ್ಷಕ ದಳ(ತೃ) ಬಹುಮಾನ ಪಡೆಯಿತು. ಹಿರಿಯ ಎನ್‌ಸಿಸಿ ತಂಡ-ಸರ್ಕಾರಿ ಕಾಲೇಜು ಎನ್‌ಸಿಸಿ ಬಾಲಕಿಯರು(ಪ್ರ), ಪಿಇಎಸ್ ಕಾಲೇಜು ಎನ್‌ಸಿಸಿ ಬಾಲಕರು(ದ್ವಿ). ಕಿರಿಯ ಎನ್‌ಸಿಸಿ ತಂಡ-ಕಾಳೇಗೌಡ ಪ್ರೌಢಶಾಲೆ ಎನ್‌ಸಿಸಿ ತಂಡ(ಪ್ರ). ಸ್ಕೌಟ್ಸ್ ಮತ್ತು ಗೈಡ್ಸ್ ತಂಡ-ಸರ್ಕಾರಿ ಪ್ರೌಢಶಾಲೆ, ಕಲ್ಲುಕಟ್ಟಡ ಗೈಡ್ಸ್(ಪ್ರ).
ಪ್ರೌಢಶಾಲಾ ತಂಡ-ಅಭಿನವ ಭಾರತಿ(ಪ್ರ), ಡ್ಯಾಪೋಡಿಲ್ಸ್(ದ್ವಿ), ಆದರ್ಶ ಶಾಲೆ(ತೃ), ಸಮಾಧಾನಕರ ಬಹುಮಾನ-ಸದ್ವಿದ್ಯಾ ಪ್ರೌಢಶಾಲೆ(ಪ್ರ), ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ(ದ್ವಿ), ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ(ತೃ), ಮಾಂಡವ್ಯ ಪ್ರೌಢಶಾಲೆ(ನಾಲ್ಕನೇ)ಬಹುಮಾನ ಪಡೆದರು. ಹಿರಿಯ ಪ್ರಾಥಮಿಕ ಶಾಲಾ ತಂಡ-ಆದರ್ಶ ಹಿರಿಯ ಪ್ರಾಥಮಿಕ ಶಾಲೆ(ಪ್ರ), ಕಾರ್ಮಲ್ ಹಿರಿಯ ಪ್ರಾಥಮಿಕ ಶಾಲೆ(ದ್ವಿ), ಲಕ್ಷ್ಮೀಜನಾರ್ದನ ಹಿರಿಯ ಪ್ರಾಥಮಿಕ ಶಾಲೆ(ತೃ) ಬಹುಮಾನ ಪಡೆಯಿತು.
ಸರ್ವೋತ್ತಮ ಪ್ರಶಸ್ತಿ: ಜಿಲ್ಲೆಯ ಹತ್ತು ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು, ಪಾಂಡವಪುರ ಉಪವಿಭಾಗದ ಕೃಷಿ ಇಲಾಖೆ ಉಪನಿರ್ದೇಶಕಿ ಕೆ.ಮಾಲತಿ, ತೂಬಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಎಸ್.ಡಿ.ಚಂದ್ರಶೇಖರ್, ಕೆ.ಆರ್.ಪೇಟೆ ತಾ.ಪಂ ಸಹಾಯಕ ನಿರ್ದೇಶಕಿ ಪಿ.ಮೇನಕಾದೇವಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಕೆ.ಶಿವಮೂರ್ತಿ, ಬಸರಾಳು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ.ಕೃಷ್ಣಯ್ಯ, ನಗುವನಹಳ್ಳಿ ಗ್ರಾ.ಪಂ ಪಿಡಿಒ ಎಚ್.ಜಿ.ಯೋಗೇಶ್, ಕೆರಗೋಡು ನಾಡಕಚೇರಿ ಎಂ.ವಿ.ರೇಖಾ, ಬನ್ನಂಗಾಡಿ ಗ್ರಾಮ ಲೆಕ್ಕಾಧಿಕಾರಿ ಎಂ.ಕೆ.ನಾಗರಾಜು, ನಗರಸಭೆ ಪೌರಕಾರ್ಮಿಕ ವಿ.ಚಂದ್ರಶೇಖರ ಅವರಿಗೆ ಪ್ರಶಸ್ತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net