ಬಾಲಕಿ ಅತ್ಯಾಚಾರ,ಕೊಲೆ ಖಂಡಿಸಿ ಪ್ರತಿಭಟನೆ

CTD 04 PROTEST.jpg NN
Published on

ಚಿತ್ರದುರ್ಗ: ಮಂಡ್ಯ ಜಿಲ್ಲೆಯಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ,ಕೊಲೆ ಪ್ರಕರಣವನ್ನು ಖಂಡಿಸಿ ರಾಜ್ಯಬಂಜಾರ ವಿದ್ಯಾರ್ಥಿಗಳ ಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಚಿತ್ರದುರ್ಗ ತಾಪಂ ಸದಸ್ಯ ಸುರೇಶ್‌ನಾಯ್ಕ,ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಹತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ನೊಂದ ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸ ಬೇಕು.
ಬಂಜಾರ ಸಮುದಾಯದವರು ಅತ್ಯಂತ ಕಡು ಬಡವರಾಗಿದ್ದು,ಕೂಲಿ ಹುಡುಕಿಕೊಂಡು ಒಂದು ಊರಿನಿಂದ ಮತ್ತೊಂದು ಊರಿಗೆ ಹೋದಾಗ ಅಲ್ಲಿನ ಜಿಲ್ಲಾ ಡಳಿತ,ಕಾರ್ಮಿಕ ಇಲಾಖೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಸರ್ಕಾರ ಈ ವಿಚಾರವನ್ನು ಗಂಭೀರ ವಾಗಿ ಪರಿಗಣಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ರಾಜ್ಯಬಂಜಾರ ವಿದ್ಯಾರ್ಥಿಗಳ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ರಾಮನಾಯ್ಕ,ವಕೀಲ ಶಿವುಯಾದವ್,ಸತೀಶ್‌ನಾಯ್ಕ,ವೀಣಾ,ಗಿರೀಶ್‌ನಾಯ್ಕ,ಟಿ.ಶಫಿವುಲ್ಲಾ,ತ್ರಿವೇಣಿಸೇನ್,ಅಶ್ವಿನಿ,ಗೀತಾ,ಗಣೇಶ್, ಅರ್ಜುನ್,ಸಂದೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net