ಹಾಲು ಶೇಖರಣೆಯಲ್ಲಿ ಮಂಡ್ಯ ಡೇರಿ ಮೊದಲು

22M.D.R.5
ಗೆಜ್ಜಲಗೆರೆ ಹಾಲು ಒಕ್ಕೂಟದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯನ್ನು ಅಧ್ಯಕ್ಷ ಬೋರೇಗೌಡ ಉದ್ಘಾಟಿಸಿದರು. ರಘುನಂದನ್, ರೂಪಾ, ಕದಲೂರು ರಾಮಕೃಷ್ಣ, ನೆಲ್ಲಿಗೆರೆ ಬಾಲು, ಡಾ.ಮಂಜೇಶ್ ಇತರರಿದ್ದರು.
Published on

ಮದ್ದೂರು : ಒಕ್ಕೂಟದ ಹಾಲು ಉತ್ಪನ್ನಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ರಪ್ತು ಪರವಾನಗಿ ಪಡೆಯಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಬೋರೇಗೌಡ ಶುಕ್ರವಾರ ಹೇಳಿದರು.
ತಾಲೂಕಿನ ಗೆಜ್ಜಲಗೆರೆ ಹಾಲು ಒಕ್ಕೂಟದ ಆವರಣದಲ್ಲಿ ನಡೆದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕೂಟದಲ್ಲಿ ಮೇಗಾ ಡೇರಿ ಚಾಲನೆಯಾದ ನಂತರ ಒಕ್ಕೂಟ ಹಂತ ಹಂತವಾಗಿ ಆರ್ಥಿಕವಾಗಿ ಸದೃಢಗೊಳ್ಳುತ್ತಿದೆ. ರಾಜ್ಯದ 15 ಜಿಲ್ಲಾ ಹಾಲು ಒಕ್ಕೂಟಗಳ ಪೈಕಿ ಮಂಡ್ಯ ಒಕ್ಕೂಟ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಶೇಖರಿಸುವ ಏಕೈಕ ಒಕ್ಕೂಟ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು. ಕರ್ನಾಟಕ ಹೊರತು ಪಡಿಸಿ ನಂದಿನಿ ಹಾಲಿನ ಉತ್ಪನ್ನ ಮಾರಾಟ ಜಾಲ ವಿಸ್ತರಿಸಲು ಈಗಾಗಲೇ ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯಗಳ ಹಲವು ಪಟ್ಟಣಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಒಕ್ಕೂಟದ ಉತ್ಪನ್ನಗಳನ್ನು ಹೊರ ದೇಶಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ರಪ್ತು ಪರವಾನಿಗೆ ಪಡೆಯಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 4 ಲಕ್ಷ ಲೀಟರ್ ಹಾಲು ಹಾಗೂ 1 ಲಕ್ಷ ಕೆ.ಜಿ.ಮೊಸರು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಅಲ್ಲದೆ ಒಕ್ಕೂಟದಲ್ಲಿ ನಂದಿನಿ ಅಕ್ವ ಘಟಕ ಸ್ಥಾಪಿಸಲು ಬಿಪಿಆರ್ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು. ರೈತರು ಒಕ್ಕೂಟಕ್ಕೆ ಸಹಕಾರ ಸಂಘಗಳ ಮೂಲಕ ಹಾಲನ್ನು ಸರಬರಾಜು ಮಾಡುವಾಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ರೈತರೊಂದಿಗೆ ಒಕ್ಕೂಟವು ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗುತ್ತದೆೆ ಎಂದು ಒಕ್ಕೂಟದ ಅಧ್ಯಕ್ಷ ಬೋರೇಗೌಡ ಹೇಳಿದರು.

ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್.ರಘುನಂದನ್, ನಿರ್ದೇಶಕ ಹಾಗೂ ಶಾಸಕ ಎಚ್.ಟಿ.ಮಂಜು, ನಿರ್ದೇಶಕರಾದ ವಿ.ಎಂ.ವಿಶ್ವನಾಥ್, ಬಿ.ಆರ್.ರಾಮಚಂದ್ರ, ಯು.ಸಿ.ಶಿವಕುಮಾರ್, ಕೆ.ರವಿ, ಎಸ್.ಪಿ.ಸ್ವಾಮಿ, ಎಂ.ರೂಪಾ, ನೆಲ್ಲಿಗೆರೆ ಬಾಲು, ಕೆ.ರಾಮಚಂದ್ರ, ಎನ್.ಬಾಲಕೃಷ್ಣ, ರವಿ, ಕದಲೂರು ರಾಮಕೃಷ್ಣ, ಒಕ್ಕೂಟದ ವ್ಯವಸ್ಥಾಪಕ ಡಾ.ಪಿ.ಆರ್.ಮಂಜೇಶ್, ವ್ಯವಸ್ಥಾಪಕರಾದ ಡಾ.ಅಕಲಪ್ಪರೆಡ್ಡಿ, ಗಿರೀಶ್, ಸಿದ್ದರಾಮಪ್ಪ ಎಸ್. ಕಣ್ಣೂರ, ಶ್ಯಾಮಸುಂದರ್, ಶಿವಕುಮಾರ್, ಪ್ರಭಾಕರ್, ಪುಷ್ಪಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net