

ಮಂಡ್ಯ: ಕೋವಿಡ್ ಟೆಸ್ಟ್ ನಡೆಸದಂತೆ ಜನರನ್ನು ಎತ್ತಿಕಟ್ಟಿ ಕಿರಿಕ್ ಮಾಡಿದ ಆರೋಪ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ವಿರುದ್ಧ ಕೇಳಿಬಂದಿದೆ.
ನಗರದ ಅಂಬೇಡ್ಕರ್ ಭವನದಲ್ಲಿಂದು ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ನಡೆಯುತ್ತಿತ್ತು. ಭವನದ ಬಳಿ ಶ್ರೀಕಂಠೇಗೌಡರ ಮನೆ ಇರುವ ಕಾರಣಕ್ಕೆ ಪರೀಕ್ಷೆ ಮಾಡಬೇಡಿ ಎಂದು ಜನರನ್ನು ಎತ್ತಿಕಟ್ಟಿ ಗಲಾಟೆ ಮಾಡಿದ್ದಾರೆ. ಈ ವೇಳೆ ಶ್ರೀಕಂಠೇಗೌಡರ ಪುತ್ರನಿಂದ ಪತ್ರಕರ್ತರ ಮೇಲೆ ಹಲ್ಲೆಯೂ ನಡೆದಿದೆ ಎನ್ನಲಾಗಿದೆ.
ಮಾಧ್ಯಮದವರಿಗೆ ಕರೊನಾ ಟೆಸ್ಟ್ ಮಾಡದಂತೆ ಗಲಾಟೆ ಆರಂಭಿಸಿ, ಹಲ್ಲೆ ಮಾಡಿ ದೊಡ್ಡ ಹೈಡ್ರಾಮವೇ ಸೃಷ್ಟಿಸಿದ್ದಾರೆ. ಈ ವೇಳೆ ಪೊಲೀಸರು ಗಲಾಟೆಯನ್ನು ನಿಲ್ಲಿಸಿ ಶ್ರೀಕಂಠೆಗೌಡರ ಪುತ್ರನನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ.