ನಗರಸಭೆ ಗದ್ದುಗೆ ಹಿಡಿದ ಜೆಡಿಎಸ್

02_11_Mdy_Mandya Cmc 01
Published on

ಮಂಡ್ಯ: ನಿರೀಕ್ಷೆಯಂತೆ ಮಂಡ್ಯ ನಗರಸಭೆ ಗದ್ದುಗೆ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಅಧ್ಯಕ್ಷರಾಗಿ ಎಚ್.ಎಸ್.ಮಂಜು ಹಾಗೂ ಉಪಾಧ್ಯಕ್ಷರಾಗಿ ಇಸ್ರಾತ್ ಫಾತಿಮಾ ಅವಿರೋಧವಾಗಿ ಆಯ್ಕೆಯಾದರು.
ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ 20ನೇ ವಾರ್ಡ್‌ನ ಎಚ್.ಎಸ್.ಮಂಜು, ಕಾಂಗ್ರೆಸ್‌ನಿಂದ 10ನೇ ವಾರ್ಡ್‌ನ ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ 13ನೇ ವಾರ್ಡ್‌ನ ಇಸ್ರಾತ್ ಫಾತಿಮಾ ಹಾಗೂ ಕಾಂಗ್ರೆಸ್‌ನಿಂದ 5ನೇ ವಾರ್ಡ್‌ನ ನಯೀಮ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಚುನಾವಣೆ ನಡೆಯುವುದು ಕೆಲ ಸಮಯ ಇರುವಂತೆಯೇ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಾಸ್ ಪಡೆದರು. ಜೆಡಿಎಸ್ ಅಭ್ಯರ್ಥಿಗಳಿಗೆ ಐವರು ಪಕ್ಷೇತರರು ಹಾಗೂ ಇಬ್ಬರು ಬಿಜೆಪಿ ಸದಸ್ಯರು ಸಹ ಬೆಂಬಲ ಸೂಚಿಸಿದರು. ಆದರೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ ಅಂತಿಮ ಫಲಿತಾಂಶ ಘೋಷಣೆ ಮಾಡಲಿಲ್ಲ. 35 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2, ಐವರು ಪಕ್ಷೇತರ ಸದಸ್ಯರಿದ್ದರು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ನೇಹಾ ಜೈನ್ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net