ನ.7ರಿಂದ ರೈತರು ಧರಣಿ ನಡೆಸುತ್ತಿದ್ದರೂ ಸರ್ಕಾರದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಲವು ಕನ್ನಡಪರ ಸಂಘಟನೆಗಳು, ದಲಿತ, ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿ ಬಂದ್‌ನಲ್ಲಿ ಪಾಲ್ಗೊಂಡವು. ಮಾತ್ರವಲ್ಲದೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಕೂಡ ಪ್ರತಿಭಟನೆಗೆ ಸಾಥ್ ನೀಡಿದರು. ಇನ್ನು ನಗರದ ಬಹುತೇಕ ಅಂಗಡಿ ಮಳಿಗೆಗಳ ಎದುರು ‘ರೈತರೊಂದಿಗೆ ನಾವಿದ್ದೇವೆ’ ಎನ್ನುವ ನಾಮಫಲಕ ಹಾಕಿ ವರ್ತಕರು ಕೂಡ ಬೆಂಬಲ ನೀಡಿದರು.