ದೆಹಲಿ ಕೆಂಪುಕೋಟೆಯಲ್ಲಿ ಪರೇಡ್: ಮಂಡ್ಯ ಬೆಲ್ಲ ರೈತರ ಉತ್ಪಾದಕರ ಕಂಪನಿ ಆಯ್ಕೆ

Mandya Bella Farmer Producer Company Selected for Delhi Parade Mandya
Published on

ಮಂಡ್ಯ: ದೆಹಲಿ ಕೆಂಪು ಕೋಟೆಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಆಯ್ಕೆಯಾಗಿದೆ.

ಕೇಂದ ಸರ್ಕಾರದ ಯೋಜನೆಯಿಂದ ಪ್ರಾರಂಭವಾಗಿ ರಾಜ್ಯಾದ್ಯಂತ ರಾಸಾಯನಿಕ ಮುಕ್ತ ಬೆಲ್ಲದ ಮಾರಾಟ ಮಾಡುವ ಮೂಲಕ ಅತ್ಯಂತ ಕ್ರಿಯಾಶೀಲವಾಗಿ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕಾರಿಗಳು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಅದರಂತೆ ಕಂಪನಿ ಅಧ್ಯಕ್ಷ ಕಾರಸವಾಡಿ ಮಹದೇವು, ಪದಾಧಿಕಾರಿಗಳಾದ ಹಳುವಾಡಿ ಕೃಷ್ಣ, ವೆಂಕಟೇಗೌಡ, ಮಂಗಲ ಪ್ರಕಾಶ್ ಗಣರಾಜ್ಯೋತ್ಸವದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net