ಮಂಡ್ಯ, ಮೈಸೂರು ಖೋಖೋ ಚಾಂಪಿಯನ್: ಪುರುಷರ ವಿಭಾಗದಲ್ಲಿ ಪಿಇಎಸ್, ಮಹಿಳಾ ವಿಭಾಗದಲ್ಲಿ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯು ತಂಡಕ್ಕೆ ಪ್ರಶಸ್ತಿ

Mandya and Mysore Kho Kho champions Mandya
Published on

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಧೀನದ ಖೋಖೋ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಆತಿಥೇಯ ಪಿಇಎಸ್ ಹಾಗೂ ಮಹಿಳಾ ವಿಭಾಗದಲ್ಲಿ ಮೈಸೂರಿನ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದವು.

ರೆಸ್ಟ್ ಆಫ್ ಬೆಂಗಳೂರು ವಿಭಾಗದ ಮಹಿಳೆಯರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ತಂಡವನ್ನು 3-2 ಅಂಕದಿಂದ ಸೋಲಿಸಿತು. ಅಂತೆಯೇ ಪಿಇಎಸ್ ತಂಡ ಮೂರನೇ ಹಾಗೂ ಕೆ.ಆರ್.ಪೇಟೆ ತಂಡ ನಾಲ್ಕನೇ ಸ್ಥಾನ ಪಡೆದವು. ಇನ್ನು ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಪಿಇಎಸ್ ಕಾಲೇಜು ತಂಡ 9-3 ಅಂಕಗಳಿಂದ ಗುಬ್ಬಿ ತಂಡವನ್ನು ಸೋಲಿಸಿ ಹದಿನೈದು ವರ್ಷದ ಬಳಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ತುಮಕೂರು ಎಸ್‌ಐಟಿ ಮೂರು ಹಾಗೂ ಬೆಂಗಳೂರು ಜಿಎಟಿ ನಾಲ್ಕನೇ ತಂಡ ಪಡೆದುಕೊಂಡಿತು. ಮೂರು ದಿನಗಳ ಕ್ರೀಡಾ ಉತ್ಸವದಲ್ಲಿ ಪುರುಷರ ವಿಭಾಗದಲ್ಲಿ 13 ಹಾಗೂ ಮಹಿಳೆಯರ ವಿಭಾಗದಲ್ಲಿ 6 ತಂಡ ಭಾಗವಹಿಸಿದ್ದವು. ತೀರ್ಪುಗಾರರು, ಆಯ್ಕೆ ಸಮಿತಿಯ ಸದಸ್ಯರು ಸೇರಿದಂತೆ ಒಟ್ಟು 380ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಲ್.ಮುರುಳಿಕೃಷ್ಣ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಆಯ್ಕೆ ಪ್ರಕ್ರಿಯೆಯ ಸದಸ್ಯರು, ಪಿಇಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅನಂತಪದ್ಮನಾಭ ಪ್ರಭು, ಆರ್.ವಿ.ವಿದ್ಯಾ ಇತರರಿದ್ದರು.

Mandya and Mysore Kho Kho champions Mandya
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net