ಮಂದಿರಗಳು ಸನ್ಮಾರ್ಗಕ್ಕೆ ದಾರಿ

19KOUJALAGI1
Published on

ಕೌಜಲಗಿ: ಮಠ-ಮಂದಿರಗಳು ಸನ್ಮಾರ್ಗದಲ್ಲಿ ನಡೆಯುವುದನ್ನು ಪ್ರೋತ್ಸಾಹಿಸುತ್ತವೆ. ಸಮಾಜ ಅದನ್ನು ಅನುಸರಿಸುತ್ತದೆ. ಸಮಾಜದಲ್ಲಿ ನೆಮ್ಮದಿ ನೆಲೆಸಲು ಮಠಗಳ ಪಾತ್ರ ಅಪಾರ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಗ್ರಾಮದ ವಿಠ್ಠಲ ಬೀರದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ರಾಜ್ಯಸಭಾ ಸದಸ್ಯರ ಸ್ಥಳಿಯ ಪ್ರದೇಶಾಭಿವದ್ಧಿ ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ದೇವರ ಜಾತ್ರೆ ಅದ್ದೂರಿಯಾಗಿ ನೆರವೇರಿತು. ವಿವಿಧ ಧಾರ್ಮಿಕ, ಸಾಂಸತಿಕ ಕಾರ್ಯಕ್ರಮಗಳು, ಪೂಜಾ ಕೈಂಕರ್ಯಗಳು ಜರುಗಿದವು. ವಿಠ್ಠಲ ದೇವಋಷಿ, ಪುಂಡಲೀಕ ಸಣ್ಣಕ್ಕಿ, ಎಂ.ಎನ್​. ಶಿವನಮಾರಿ, ಶಿವಾನಂದ ಲೋಕನ್ನವರ, ಬಸವರಾಜ ಲೋಕಣ್ಣವರ, ಸಿದ್ದಪ್ಪ ಹಳ್ಳೂರ, ಸಿದ್ದಪ್ಪ ಬಿಸಗುಪ್ಪಿ, ಅಶೋಕ ಹೊಸಮನಿ, ಬಸವರಾಜ ಯಲಿಗಾರ, ಶ್ರೀಶೆಲ್​ ಗಾಣಿಗೇರ, ಅಶೋಕ ಪಾಟೀಲ, ಕರೆಪ್ಪ ಮೂಡಲಗಿ, ಬಸಪ್ಪ ದಾನನ್ನವರ, ಈರಪ್ಪಣ್ಣ ಬಿಸಗುಪ್ಪಿ, ಚಂದ್ರು ದೂಳಗಪ್ಪನ್ನವರ, ಯಲ್ಲಪ್ಪ ಸಣ್ಣಕ್ಕಿ, ಅಶೋಕ ಪಾಟೀಲ, ಜಗದೀಶ ದಳವಾಯಿ, ಶಿವಪ್ಪ ಸಂಗಟಿ, ಕಲ್ಲಪ್ಪ ಉಳಗದವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net