ಮಂದಾರ್ತಿ ದೇವಿಗೆ ಚಿನ್ನದ ಮುಖ ಕವಚ ಸಮರ್ಪಣೆ

mandarthi
Published on

ಮಂದಾರ್ತಿ: ಪುಣ್ಯಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಉದ್ಯಮಿ ಶಶಿಧರ ಎನ್. ಶೆಟ್ಟಿ ಮತ್ತು ಕುಟುಂಬದವರು ಸೇವಾರ್ಥವಾಗಿ ನೀಡಿದ ಚಿನ್ನದ ಮುಖ ಕವಚವನ್ನು ಗುರುವಾರ ಸಮರ್ಪಿಸಲಾಯಿತು, ದೇವಳದ ತಂತ್ರಿಗಳಾದ ಹೃಷಿಕೇಶ ಬಾಯಿರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಮತ್ತು ದೇವಿಗೆ ಕಲಶಾಭಿಷೇಕ ನಡೆಯಿತು. ನಂತರ ಚಿನ್ನದ ಮುಖ ಕವಚವನ್ನು ತೊಡಿಸಲಾಯಿತು.

ಶಶಿಧರ ಎನ್. ಶೆಟ್ಟಿ ಮತ್ತು ಕುಟುಂಬದವರು, ದೇವಳದ ಆನುವಂಶಿಕ ಮೊಕ್ತೇಸರ ಧನಂಜಯ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಪ್ರಭಾಕರ ಶೆಟ್ಟಿ, ಹಿರಿಯರಾದ ವಿಠಲ ಶೆಟ್ಟಿ ಶೇಡಿಕೊಡ್ಲು, ಅರ್ಚಕ ಸದಾಶಿವ ಉಡುಪ, ದೇವಳದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಎಸ್.ಪಿ.ಬಿ, ದೇವಸ್ಥಾನದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net