ಶಂಕರನಾರಾಯಣ ಭಟ್ಟರಿಗೆ ಮಂಡೆಚ್ಚ ಪ್ರಶಸ್ತಿ

Padyana
ಪದ್ಯಾಣ ಶಂಕರನಾರಾಯಣ ಭಟ್
Published on

ಕಟೀಲು: ಭಾಗವತ ದಾಮೋದರ ಮಂಡೆಚ್ಚ ಅವರ ಹೆಸರಿನಲ್ಲಿ ನೀಡಲಾಗುವ ಈ ವರ್ಷದ ಮಂಡೆಚ್ಚ ಪ್ರಶಸ್ತಿಗೆ ಮದ್ದಲೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರು ಆಯ್ಕೆಯಾಗಿದ್ದಾರೆ. ಅವರು ಸುಂಕದಕಟ್ಟೆ, ಕರ್ನಾಟಕ, ಕದ್ರಿ, ಸುರತ್ಕಲ್, ಕಟೀಲು, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ನಾಲ್ಕು ದಶಕಗಳಿಂದ ಸಮರ್ಥ ಮದ್ದಲೆಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಜುಲೈ 15ರಂದು ಕಟೀಲು ಸರಸ್ವತಿ ಸದನದಲ್ಲಿ ನಡೆಯುವ ಕಾರ‌್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.. ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಪ್ರಾಯೋಜಕತ್ವದ ಈ ಪ್ರಶಸ್ತಿ ಹತ್ತು ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಬಳಿಕ ಭಾಗವತ, ಪ್ರಸಂಗಕರ್ತಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆ ಮಾಡಲಾಗುವುದು. ಕಟೀಲು ಮೇಳಗಳ ಕಲಾವಿದರಿಂದ ಕೃಷ್ಣ ಸಂಧಾನ, ದುಶ್ಶಾಸನ ವಧೆ, ಸೈಂಧವ ವಧೆ, ಕರ್ಣಪರ್ವ ಯಕ್ಷಗಾನ ಬಯಲಾಟ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net