ಎಸ್.ಎಲ್.ಕೃಷ್ಣವೇಣಿ ರಾಜ್ಯಕ್ಕೆ 12ನೇ ಸ್ಥಾನ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಾಧನೆ

Mandavya Integrated PU College Performance in Second PUC Result Mandya
Published on

ಮಂಡ್ಯ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಇಲ್ಲಿನ ನೆಹರು ನಗರದ ಮಾಂಡವ್ಯ ಇಂಟಿಗ್ರೇಟೆಡ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಸ್.ಎಲ್.ಕೃಷ್ಣವೇಣಿ 587 ಅಂಕ ಪಡೆದು ರಾಜ್ಯಕ್ಕೆ 12ನೇ ಸ್ಥಾನ ಮತ್ತು ಜಿಲ್ಲೆಗೆ 4ನೇ ಸ್ಥಾನ ಪಡೆದಿದ್ದಾರೆ.

ಕೆ.ವಿ.ಸಹನಾ(570), ಪಿ.ಮೌಲ್ಯಾ(568) ಅಂಕ ಪಡೆದಿದ್ದಾರೆ. ಅಂತೆಯೇ 22 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 78 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆಯುವುದರ ಜತೆಗೆ ಗಣಿತಶಾಸ್ತ್ರ ವಿಷಯದಲ್ಲಿ ಎಸ್.ಎಲ್. ಕೃಷ್ಣವೇಣಿ ಮತ್ತು ಪಿ.ಮೌಲ್ಯಾ ನೂರು ಅಂಕ ಪಡೆದಿದ್ದಾರೆ. ಅತ್ಯುನ್ನತ ಫಲಿತಾಂಶ ನೀಡಿರುವ ವಿದ್ಯಾರ್ಥಿಗಳು ಹಾಗೂ ಇದಕ್ಕೆ ಕಾರಣರಾದ ಉಪನ್ಯಾಸಕರನ್ನು ಎಸ್‌ಬಿ ಎಜುಕೇಷನ್ ಟಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಶೈಕ್ಷಣಿಕ ಪಾಲುದಾರರಾದ ಎಂ.ಅವಿನಾಶ್ ಮಾರಗೌಡನಹಳ್ಳಿ, ಡಾ.ಎಂ.ಪಿ.ಮೋಹನ್, ಡಿ.ಎಸ್.ರಾಘವೇಂದ್ರ, ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net