ಜಾನುವಾರಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ

11 mdl 01
ಮುದಗಲ್ ಸಮೀಪದ ಚಿಕ್ಕಲೆಕ್ಕಿಹಾಳ ಗ್ರಾಮದಲ್ಲಿ ಜಾನುವಾರುಗಳಿಗೆ 5ನೇ ಹಂತದ ಕಾಲು ಮತ್ತು ಬಾಯಿ ಬೇನೆ ರೋಗಗಳ ಮುನ್ನೆಚ್ಚರಿಕೆ ಕ್ರಮದ ಲಸಿಕೆಯನ್ನು ವೈದ್ಯರ ತಂಡದಿಂದ ಸೋಮವಾರ ನೀಡಲಾಯಿತು.
Published on

ಮುದಗಲ್: ಪಟ್ಟಣ ಸಮೀಪದ ಆಮದಿಹಾಳ ಪಶು ಚಿಕಿತ್ಸಾಲಯ ವೈದ್ಯರಿಂದ ಜಾನುವಾರುಗಳಿಗೆ 5ನೇ ಹಂತದ ಕಾಲು ಮತ್ತು ಬಾಯಿ ಬೇನೆ ರೋಗಗಳ ಮುನ್ನೆಚ್ಚರಿಕೆ ಕ್ರಮದ ಲಸಿಕೆಯನ್ನು ಸೋಮವಾರ ನೀಡಲಾಯಿತು.

ಅ. 21 ರಿಂದ ನ.20 ರವರೆಗೆ ಪ್ರತಿ 6 ತಿಂಗಳಿಗೊಮ್ಮೆ ನಡೆಯುವ ಈ ಲಸಿಕಾ ಕಾರ್ಯಕ್ರಮವಾಗಿದೆ. ಜಾನುವಾರುಗಳಿಗೆ ಕಾಲು ಬೇನೆ ಮತ್ತು ಬಾಯಿ ಬೇನೆ ಕಾಣಿಸಿಕೊಳ್ಳುವ ಮುಂಚಿತವಾಗಿ ಈ ಲಸಿಕೆಯನ್ನು ನೀಡಲಾಗುತ್ತಿದೆ.

ರೈತರು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ವೈದ್ಯರಾದ ಸುಧೀಂದ್ರ ಕುಲ್ಕರ್ಣಿ ಹಾಗೂ ಅಮರಪ್ಪ ಬನ್ನಿಗೋಳ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net