ಕಡ್ಡಾಯ ಲಸಿಕೆ ಹಾಕಿಸಲಿ

22Rayabag1
Published on

ರಾಯಬಾಗ: ಜಾನುವಾರುಗಳಿಗೆ ಬಾಧಿಸುವ ಕಾಲುಬಾಯಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೈತರು ಹಾಗೂ ಹೈನುಗಾರರು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪಶು ಇಲಾಖೆಯ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೈತರ ದುಬಾರಿ ಬೆಲೆಯ ಜಾನುವಾರುಗಳ ಹಿತದೃಷ್ಟಿಯಿಂದ ಕಾಲುಬಾಯಿ ರೋಗ ಮುಕ್ತ ರಾಜ್ಯಮಾಡುವ ಸದುದ್ದೇಶ ಹೊಂದಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಮಾತನಾಡಿ, ಕಾಲುಬಾಯಿ ರೋಗ ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಕಂಡುಬರುವ ಮಾರಕ ಕಾಯಿಲೆಯಾಗಿದೆ. ಇದರಿಂದ ರಕ್ಷಿಸುವ ಸಲುವಾಗಿ 3 ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಸುರೇಶ ಮುಂಜೆ, ಕುರಿ ಮಹಾಮಂಡಳಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಎಸ್.ಜಂಬಗಿ, ಪಶು ವೈದ್ಯಾಧಿಕಾರಿ ಡಾ.ಸಚಿನ ಸೌಂದಲಗಿ, ಡಾ.ಪ್ರಮೋದ ತಳವಾರ, ಡಾ.ಪ್ರಶಾಂತ ಮಶಾಲಜಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಆನಂದ ಕದಂ, ಕೃಷ್ಣ ಕಟ್ಟಿಕಾರ, ಸಿದ್ದು ಅಲಖನೂರ, ಪ್ರಕಾಶ ಗಡಗಲಿ, ಶ್ರೀಕಾಂತ ಹುಕ್ಕೇರಿ, ಸಂತೋಷ ಮನ್ನಿಕೇರಿ, ಶಿವಾನಂದ ತಾವದಾರೆ, ವಿಶ್ವನಾಥ ಕಾಂಬಳೆ, ವಿಲಾಸ್ ಹೂಗಾರ, ಶ್ರೀಕಾಂತ ಗೊಂಡೆ, ಲಕ್ಕಣ್ಣ ಜಾಧವ, ಕೆಂಚಪ್ಪ ಬಬಲೇಶ್ವರ, ಮಲ್ಲಪ್ಪ ಶಾರಬಿದ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net