ಚನ್ನಮ್ಮಳ ಧೈರ್ಯ ಮಾದರಿ

21Kagavad3
Published on

ಕಾಗವಾಡ: ಕಿತ್ತೂರು ಚನ್ನಮ್ಮಳ ಧೈರ್ಯ, ಸಾಹಸ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪ್ರೊ. ಎನ್.ಎಂ.ಬಾಗೇವಾಡಿ ಕರೆ ನೀಡಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಿತ್ತೂರು ಉತ್ಸವದ 200ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಡಾ.ಎಸ್.ಎ.ಕರ್ಕಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಎಂ.ಜಕ್ಕಣ್ಣವರ ಮಾತನಾಡಿ, ಕಿತ್ತೂರು ಸಂಸ್ಥಾನ ನಾಡಿನ ಅಸ್ಮಿತೆಯಾಗಿದೆ ಎಂದರು. ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು.

ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಡಾ.ಆರ್.ಎಸ್.ಕಲ್ಲೋಳಿಕರ ಸ್ವಾಗತಿಸಿದರು. ಎಸ್.ಎಂ.ಪರಗೌಡ ಮತ್ತು ಜೆ.ಎನ್.ನಾಯಕ ನಿರೂಪಿಸಿದರು. ಡಾ.ಎಸ್.ಪಿ.ತಳವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net