

ಹುಕ್ಕೇರಿ: ಸ್ವಸಹಾಯ ಸಂಘಗಳು ಸಾಲ ಪಡೆದು ಆರ್ಥಿಕವಾಗಿ ಸುಧಾರಣೆಯಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ. ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸ್ವನಿವಾಸದಲ್ಲಿ ಸಂಕೇಶ್ವರದ ಪಾದಗುಡಿ ಬಸವ ಯುವಕ ಸ್ವಸಹಾಯ ಸಂಘಕ್ಕೆ 2.5 ಲಕ್ಷ ರೂ. ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರಿಗೆ ಹಲವು ಯೋಜನೆ ಜಾರಿ ಮಾಡಿದ್ದಾರೆ ಎಂದರು. ದೇಶಾದ್ಯಂತ ಕರೊನಾ ಹಾವಳಿ ಹೆಚ್ಚಾಗುತ್ತಿದ್ದು, ಜನರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಚೇತನ ಬಶೆಟ್ಟಿ, ಸಾಗರ ಜಕಾತೆ, ಆನಂದ ಸಂಸುದ್ದಿ, ಸಾಗರ ಬಶೆಟ್ಟಿ, ಚೇತನ ಸಂಗಾಯಿ, ಬಂಟು ಬೋರೆ, ಪುಟ್ಟು ಮಹಾಳಂಕ, ನಾಗರಾಜ ದೇಸಾಯಿ, ಶ್ರೀಶೈಲ ಕರಿಶೆಟ್ಟಿ, ಪ್ರವೀಣ ಬಶೆಟ್ಟಿ, ಅಂಕುಶ ಬೋರೆ ಇತರರು ಇದ್ದರು.