ಮಂದಾರ ರಾಮಾಯಣ ಶ್ರೇಷ್ಠ ಗ್ರಂಥ: ಡಾ.ಶ್ರೀನಾಥ್ ಎಂ.ಪಿ

mandara ramayana 2
Published on

ಮೂಡುಬಿದಿರೆ: ಮಂದಾರ ರಾಮಾಯಣ ಶ್ರೇಷ್ಠ ಗ್ರಂಥ. ಗ್ರಂಥವನ್ನು ಮುಂದಿಟ್ಟುಕೊಂಡು ಈಗಾಗಲೇ ಎರಡು ಸಂಶೋಧನೆಗಳು ನಡೆದಿವೆ. ಮತ್ತಷ್ಟು ಸಂಶೋಧನೆಗಳಿಗೆ ವಿಪುಲ ಅವಕಾಶಗಳಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ದ.ಕ ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ ಹೇಳಿದರು.

ತುಳುವರ್ಲ್ಡ್ ಮಂಗಳೂರು, ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ತುಳುಕೂಟ ಬೆದ್ರ, ಮಂದಾರ ಪ್ರತಿಷ್ಠಾನ ಟ್ರಸ್ಟ್ ಆಶ್ರಯದಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ಸೋಮವಾರ ‘ಏಳದೆ ಮಂದಾರ ರಾಮಾಯಣ ಸಪ್ತಾಹ’ದ ಎರಡನೇ ದಿನದ ಅಯೋಧ್ಯಾ ಕಾಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಮಂದಾರ ಸಮ್ಮಾನ್: ಪತ್ರಕರ್ತ ಕೆ.ವಿಠ್ಠಲ ಭಂಡಾರಿ ಹರೇಕಳ ಅವರಿಗೆ ಮಂದಾರ ಸಮ್ಮಾನ್ ನೀಡಿ ಗೌರವಿಸಲಾಯಿತು. ಆಯೋಧ್ಯಾಕಾಂಡದ ಪದ್ಯ ಹಾಡಿದ ಕಾವ್ಯಶ್ರೀ ಅಜೇರು, ಭರತ್‌ರಾಜ್ ಶೆಟ್ಟಿ ಸಿದ್ದಕಟ್ಟೆ, ವಾಚನ ಮಾಡಿದ ಮುನಿರಾಜ ರೆಂಜಾಳ ಅವರನ್ನು ಗೌರವಿಸಲಾಯಿತು.

ಭಾರತ ಸರ್ಕಾರದ ವಾರ್ತಾ ಮತು ಪ್ರಸಾರ ಸಚಿವಾಲಯದ ಉಪನಿರ್ದೇಶಕಿ ಡಾ.ಟಿ.ಎಸ್ ಪೂರ್ಣಿಮಾ, ಕೆಎಂಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ದಕ್ಷಿಣ ರೈಲ್ವೇ ಸಲಹಾ ಸಮಿತಿ ಸದಸ್ಯ ಕೆ.ಪಿ ಜಗದೀಶ್ ಅಧಿಕಾರಿ, ಸಾಹಿತಿ ಹೆರಾಲ್ಡ್ ತಾವ್ರೋ, ಸಂಘಟಕರಾದ ಡಾ.ರಾಜೇಶ್ ಆಳ್ವ, ಮಂದಾರ ರಾಜೇಶ್ ಭಟ್, ಪ್ರಮೋದ್ ಸಪ್ರೆ, ಚಂದ್ರಹಾಸ ದೇವಾಡಿಗ, ಧನಕೀರ್ತಿ ಬಲಿಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net