ಹಣಕ್ಕಿಂತ ಹೃದಯವಂತಿಕೆ ಮುಖ್ಯ

mandara
Published on

ಈಶ್ವರಮಂಗಲ: ಜನರಲ್ಲಿ ಕೇವಲ ಕೋಟಿಗಟ್ಟಲೆ ಹಣವಿದ್ದರೆ ಸಾಲದು, ಹೃದಯವಂತಿಕೆ ಇರಬೇಕು ಎಂದು ಕಲಾಪೋಷಕ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು ಹೇಳಿದರು.

ಕುಂಬ್ರ ಶ್ರೀರಾಮ ಭಜನಾ ಮಂದಿರದ ರಾಮಗಿರಿ ಮಂಟಪದಲ್ಲಿ ಭಾನುವಾರ ಕುಂಬ್ರದ ವಿಶ್ವ ಯುವಕ ಮಂಡಲದ ಸಹಕಾರದಲ್ಲಿ ‘ಮಂದಾರ ಬಳಗ’ದ ಆಶ್ರಯದಲ್ಲಿ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ಹಮ್ಮಿಕೊಂಡಿದ್ದ ಮಂದಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯ ರಂಗಭೂಮಿ ಕಲಾವಿದ ಬೂಡಿಯೂರು ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಕುಂಬ್ರ ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಶುಭಾಸಂಶನೆಗೈದರು. ಕೃಷಿ ತಜ್ಞ ಕಡಮಜಲು ಸುಭಾಶ್ ರೈ, ವಕೀಲ ದುರ್ಗಾಪ್ರಸಾದ್ ರೈ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಅವರ ಪತ್ನಿ ಲಲಿತಾ ರೈ ಮಂದಾರ, ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ, ಉದ್ಯಮಿ ರಾಮಮೋಹನ್ ಭಟ್ ಪಟ್ಟೆ, ಪ್ರಗತಿಪರ ಕೃಷಿಕ ವಿನೋದ್ ಶೆಟ್ಟಿ ಅರಿಯಡ್ಕ, ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ ಸುಂದರ್ ರೈ ಕೊಪ್ಪಳ ಉಪಸ್ಥಿತರಿದ್ದರು.

ಮಂದಾರ ಬಳಗದ ಸಂಚಾಲಕರಾದ ಚಿತ್ರನಟ ಸುಂದರ್ ರೈ ಮಂದಾರ ಸ್ವಾಗತಿಸಿ, ಕುಂಬ್ರ ವಿಶ್ವ ಯುವಕ ಮಂಡಲದ ಅಧ್ಯಕ್ಷ ಅಂಕಿತ್ ರೈ ಕುಯ್ಯರು ವಂದಿಸಿದರು. ಮೋಹನ್ ಆಳ್ವ ಮುಂಡಾಳ ಕಾರ್ಯಕ್ರಮ ನಿರೂಪಿಸಿದರು.

ಗೌರವ ಪ್ರದಾನ: ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿರುವ ಪ್ರವೀಣ್ ರೈ ಪಾಲ್ತಾಡು, ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಸತೀಶ್ ಶೆಟ್ಟಿ, ಮಹಿಳಾ ಸಾಧಕಿ ಉಷಾ ನಾರಾಯಣ ಗೌಡ, ಸರ್ಕಾರಿ ಸೇವೆಯಲ್ಲಿರುವ ಉಮೇಶ್ ಪೂಜಾರಿ ಬರೆಮೇಲು, ಯುವ ಉದ್ಯಮಿ ಮೋಹನ್ ದಾಸ್ ರೈ ಕುಂಬ್ರ ಅವರಿಗೆ ಮಂದಾರ ಪ್ರಶಸ್ತಿ ನೀಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net