

ಬೇಲೂರು: ಪಟ್ಟಣದ ಲಕ್ಷ್ಮೀಪುರ ಬಡಾವಣೆಯ ಶ್ರೀ ವೀರಾಂಜನೇಯಸ್ವಾಮಿ ದೇಗುಲದ ಸಭಾಂಗಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿಗೆ ಶುಕ್ರವಾರ ಮಂಟಪ ಸೇವೆ ಪೂಜೆ ನೆರವೇರಿಸಲಾಯಿತು.
ಬಾಳೆ ಕಂದಿನಲ್ಲಿ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಅಯ್ಯಪ್ಪ ಭಕ್ತರು ಭಜನೆ ನೆರವೇರಿಸಿದರು. ಪೂಜಾ ಕಾರ್ಯವನ್ನು ಗುರುಸ್ವಾಮಿಗಳಾದ ಗಿರೀಶ್, ಶಿವಾಜಿ ನೆರವೇರಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.