ಕಾಶಿ ವಿಶ್ವೇಶ್ವರನ ಸನ್ನಿಧಿಯಲ್ಲಿ ಮಂಡಲಪೂಜೆ

04M.D.R.1
ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನದ ಮರು ಪ್ರತಿಷ್ಠಾಪನೆಯ ಮಂಡಲ ಪೂಜೆಯ ಅಂಗವಾಗಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿರುವುದು.
Published on

ಮದ್ದೂರು : ತಾಲೂಕಿನ ಕೌಡ್ಲೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಮರು ಪ್ರತಿಷ್ಠಾಪನೆ ಮಂಡಲ ಪೂಜೆ ಶನಿವಾರ ಅದ್ದೂರಿಯಾಗಿ ನಡೆಯಿತು.

48ನೇ ದಿನದ ಅಂತಿಮ ಪೂಜಾ ಕೈಂಕರ್ಯಗಳನ್ನು ಪ್ರಧಾನ ಪುರೋಹಿತ್ ಅಜಿತ್ ನಿರಂಜನ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಕೌಡ್ಲೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ನಮ್ಮ ದೇಹದ ಅಂಗಾಂಗಗಳಾದ ಪಂಚೇಂದ್ರಿಯ, ಕರ್ಮೇಂದ್ರಿಯ ಹಾಗೂ ಮನಸ್ಸು ಇವುಗಳ ಸಂಕೇತವಾಗಿ 11 ಲಿಂಗಗಳನ್ನು ಇಟ್ಟು ಪೂಜೆ ಮಾಡಿ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆಯನ್ನು ಮಾಡಿದ್ದು, ಭಕ್ತಾಧಿಗಳ ಗಮನ ಸೆಳೆಯಿತು. ಬೆಳಗ್ಗೆಯಿಂದಲೇ ಹೋಮ, ಹವನ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಟ್ರಸ್ಟ್ ಅಧ್ಯಕ್ಷ ಕೆ.ಬಿ.ನಾರಾಯಣ ದಂಪತಿ ಪೂಜಾ ಕೈಂಕರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಿದರು. ಮಹಾ ಪೋಷಕರಾದ. ಸಿ.ರಮೇಶ್, ಪಶುಪತಿ ಪ್ರಸಾದ್ ಅಯ್ಯರ್, ನಾರಾಯಣ ಸ್ವಾಮಿ, ಕೆ.ಸಿ.ಶ್ರೀಧರ್, ಕಾರ್ಯದರ್ಶಿ ಶಿವರಾಜ್, ಕೋಡಿನಾಗನಹಳ್ಳಿ ಪ್ರೆಸ್ ಚನ್ನಪ್ಪ, ಲಕ್ಷ್ಮೀನಾರಾಯಣ, ಪ್ರೇಮ್ ಕುಮಾರ್, ಕೆ.ಸಿ.ಶ್ರೀನಿವಾಸ್, ನವೀನ್ ಗೋಪಾಲ್ ಶರ್ಮ, ಸತ್ಯನಾರಾಯಣ ಪುರೋಹಿತ್, ಪಾರ್ಥಪ್ಪ ಹಾಗೂ ಕೆ.ಬಿ.ಗಂಗಾಧರ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net