ಪಟ್ಟದರಾಣಿ ದೇವಸ್ಥಾನದಲ್ಲಿ ಮಂಡಲ ಮಹೋತ್ಸವ

HALAGURU 1
ಹಲಗೂರಲ್ಲಿ ಪಟ್ಟದ ರಾಣಿಯೊಂದಿಗೆಗೆ ವಿವಿಧ ದೇವರ ಮೂರ್ತಿಗಳನ್ನು ಮೆರವಣಿಗೆ ಮಡುತ್ತಿರುವುದು.
Published on

ಹಲಗೂರು: ಇಲ್ಲಿನ ಗಾಣಿಗರ ಬೀದಿಯಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಪಟ್ಟದರಾಣಿ ದೇವಸ್ಥಾನದಲ್ಲಿ 48ನೇ ದಿನದ ಮಂಡಲ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ಮುಂಜಾನೆ ದೇವಸ್ಥಾನ ಆವರಣದಲ್ಲಿ ಹೋಮ-ಹವನ ನೆರವೇರಿಸಲಾಯಿತು. ಗ್ರಾಮ ದೇವತೆಯಾದ ಪಟ್ಟಲದಮ್ಮನ ದೇವಸ್ಥಾನದಲ್ಲಿ ಧನಗೂರಿನ ಪಟ್ಟದ ರಾಣಿ, ಬಾಣಗವಾಡಿ ಹಟ್ಟಿಮಾರಮ್ಮ, ಅಣ್ಣೂರು ಹಟ್ಟಿಮಾರಮ್ಮ, ಅಗಸನಪುರ ಕರಿಭಂಟಸ್ವಾಮಿ ಮತ್ತು ರಾಕಾಸಮ್ಮ, ಅಗಸನಪುರದ ಕರಿಭಂಟಸ್ವಾಮಿ ಮತ್ತು ರಾಕಾಸಮ್ಮ, ಕೋಡಂಬಳ್ಳಿ ಹಾಗೂ ದೊಡ್ಡ ಮುಳ್ಳೂರು ಕತ್ತಿ ರಾಕಾಸಮ್ಮ, ಮಂದಲಗಹಳ್ಳಿ ದೇವಮ್ಮ ತಾಯಿ, ಮಾದನಾಯಕನಹಳ್ಳಿ ಕಬ್ಬಾಳಮ್ಮ, ಹಲಗೂರು ಪಟ್ಟಲದಮ್ಮ, ಪಟ್ಟದ ರಾಣಿ ಮತ್ತು ದೇವರ ಸತ್ತಿಗೆಯನ್ನು ಮೆರವಣಿಗೆ ಮುಖಾಂತರ ನಡಿಕೇರಿ ವೀರಭದ್ರ ದೇವಸ್ಥಾನಕ್ಕೆ ಕರೆತಂದು ಪೂಜೆ ಸಲ್ಲಿಸಲಾಯಿತು.

ಬಳಿಕ ಮೆರವಣಿಗೆ ಮುಖಾಂತರ ದೇವರ ಮೂರ್ತಿಗಳನ್ನು ದೇವಸ್ಥಾನದ ಆವರಣಕ್ಕೆ ತರಲಾಯಿತು. ಹೋಮದ ನಂತರ ಪಟ್ಟದ ರಾಣಿ ದೇವರ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು. ನಂತರ ದೇವಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿಮಹಾ ಮಂಗಳಾರತಿ ಮಾಡಿದ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net