ಮಹಾಸತೀಶ್ವರಿ ದೇಗುಲದಲ್ಲಿ ಮಂಡಲಪೂಜೆ

kota
Published on

ಕೋಟ: ಕೋಡಿ ಕನ್ಯಾಣ ಶ್ರೀ ಮಹಾಸತೀಶ್ವರಿ ದೇಗುಲದ ವಾರ್ಷಿಕ ಗೆಂಡೋತ್ಸವ ಮತ್ತು ಮಂಡಲಪೂಜೆ, ತುಲಾಭಾರ ಸೇವೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಶನಿವಾರ ಗಣಪತಿ ಹೋಮ, ರಂಗಪೂಜೆ, ತುಳಸಿ ಪೂಜೆ, ಗೆಂಡ ಸೇವೆ, ಅನ್ನಸಂತರ್ಪಣೆ ನಡೆಯಿತು. ಭಾನುವಾರ ದೇವರಿಗೆ ಮಹಾಮಂಗಳಾರತಿ, ಮಂಡಲಪೂಜೆ, ಮಹಾಬಲಿ ಪೂಜೆ, ಶೆಡಿ ಪೂಜೆ, ಬೆನಗಲ್ಲು ಪೂಜೆ, ಜೋಗಿ ಪರುಷನ ದರ್ಶನ, ಬಾಗಿಲು ಬೊಬ್ಬರ್ಯನ ದರ್ಶನ, ಅಜ್ಜಮ್ಮ ದೇವರಿಗೆ ಪುಷ್ಪಾರ್ಚನೆ ನಡೆಯಿತು. ಧಾರ್ಮಿಕ ವಿಧಿವಿಧಾನಗಳನ್ನು ಶ್ರೀಧರ ಪುರಾಣಿಕ ತಂತ್ರಿ ನೆರವೆರಿಸಿದರು. ಅರ್ಚಕ ವೃಂದ, ಆಡಳಿತ ಮಂಡಳಿ, ಭಕ್ತರು ಭಾಗವಹಿಸಿದರು.

ಜ.20ಕ್ಕೆ ಶುದ್ಧಪೂಜೆ, ಹಸಲ ದೈವಕ್ಕೆ ಹರಕೆ ಸಲ್ಲಿಕೆ, ಕೋಳೆಯರಮಾವ ಹರಕೆ, ರಾತ್ರಿ 9ಕ್ಕೆ ಮಲಸಾವರಿ ಮತ್ತು ಪರಿವಾರ ದೈವಗಳ ಕೋಲ, ಜ.21ಕ್ಕೆ ಮಲಸಾವರಿ ದೈವ ದರ್ಶನ, ಹರಕೆ ಸೇವೆ ಕೇಳಿಕೆ, ನಿಲಾವರ ಮೇಳದಿಂದ ಕಾಲಮಿತಿಯ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net