ಮಂಡಕ್ಕಿ ಫ್ಯಾಕ್ಟರಿಗೆ ಬೆಂಕಿ

Mandakki factory fire
ಇಳಕಲ್ಲದಲ್ಲಿನ ಮಂಡಕ್ಕಿ ಫ್ಯಾಕ್ಟರಿಗೆ ಬೆಂಕಿ ತಗುಲಿರುವುದು.
Published on

ಇಳಕಲ್ಲ(ಗ್ರಾ): ನಗರದ ಸಜ್ಜನ್ ಸ್ಕೂಲ್ ಹತ್ತಿರದ ರೆಡ್ಡಿ ಅವರ ಮಂಡಕ್ಕಿ ಫ್ಯಾಕ್ಟರಿಗೆ ಸೋಮವಾರ ಬೆಳಗಿನ ಜಾವ 3-15 ಗಂಟೆ ವೇಳೆಗೆ ಬೆಂಕಿ ತಗುಲಿದ್ದನ್ನು ನೋಡಿದ ಗಸ್ತು ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಆಂಧ್ರಪ್ರದೇಶದ ರಮಣಾರೆಡ್ಡಿ ಅವರಿಗೆ ಸೇರಿದ ಎ 01 ಇಂಡಸ್ಟ್ರೀಸ್ ಮಂಡಕ್ಕಿ ಫ್ಯಾಕ್ಟರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿದೆ.

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ ನೇತೃತ್ವದಲ್ಲಿ ಭೀಮಪ್ಪ ಒನಕಿಹಾಳ, ರಫೀಕ ವಾಲಿಕಾರ, ಮಾರುತಿ ಜಾಧವ, ಬಸವರಾಜ ಶೀಲವಂತರ, ಸಂತೋಷ ಕೆಲೂರು, ವೈ.ಎಲ್.ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net