ಚೆನೈನಿಂದ ದೆಹಲಿಗೆ ಬೈಕ್ ಪ್ರಯಾಣ ಕೈಗೊಂಡ ಮಂದಾ

bike
Published on

ಹುಬ್ಬಳ್ಳಿ : ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಚೆನೈನಿಂದ ದೆಹಲಿವರೆಗೆ ಬೈಕ್​ನಲ್ಲಿ ಸುಮಾರು 22 ಸಾವಿರ ಕಿಮೀ ದೂರ ಬೈಕ್ ಪ್ರಯಾಣ ನಡೆಸಿರುವ ರಾಜಲಕ್ಷ್ಮೀ ಮಂದಾ ಅವರನ್ನು ಸೋಮವಾರದಂದು ಹುಬ್ಬಳ್ಳಿಯಿಂದ ಬೀಳ್ಕೊಡಲಾಯಿತು.

ಭಾನುವಾರ ಚೆನೈನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ರಾಜಲಕ್ಷ್ಮೀ ಮಂದಾ, ಸೋಮವಾರ ಬೆಳಗ್ಗೆ ಹೊಸಪೇಟೆ ಮಾರ್ಗದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.

‘ದೇಶಕ್ಕಾಗಿ ನಿಮ್ಮ ಮತ, ನಿಮ್ಮ ಮತವೇ ಭವಿಷ್ಯ’, ‘ಯುವಕರ ಮತ್ತು ಮಹಿಳೆಯರ ಮತ ನರೇಂದ್ರ ಮೋದಿಯವರಿಗಾಗಿ’, ‘ಮತ್ತೊಮ್ಮೆ ಮೋದಿ’ ಎಂಬ ಘೋಷಣೆಗಳೊಂದಿಗೆ ರಾಜಲಕ್ಷ್ಮೀ ಮಂದಾ ಅವರು ಜನಜಾಗೃತಿ ಮೂಡಿಸುತ್ತಿದ್ದಾರೆ.

ಅವರಿಗೆ ಹುಬ್ಬಳ್ಳಿಯಲ್ಲಿ ಸೋಮವಾರ ಬೆಳಗ್ಗೆ ಮೈಸೂರು ಪೇಟ, ಶಾಲು ತೊಡಿಸಿ ಬೀಳ್ಕೊಡಲಾಯಿತು. ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಮಲ್ಲಿಕಾರ್ಜುನ ಬಾಳಿಕಾಯಿ, ರಾಜು ಕಾಳೆ, ವೆಂಕಟೇಶ ಕಾಟವೆ, ರಾಜು ಜರತಾರಘರ, ಚಂದ್ರು ನೂಲ್ವಿ, ರಘು ಹಬೀಬ, ಚೇತನ ಕಲಾಲ, ಪ್ರಮೋದ ಹಿರೇಮಠ, ವೆಂಕಟೇಶ ಚಚಡಿ, ದೀಪಕ ಜಿತೂರಿ, ಅವಿನಾಶ ಹರಿವಾಣ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net