ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ

IMG-20230110-WA0065
Published on

ಉಡುಪಿ: 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಅಕೇಶಿಯಾ ಮರಗಳು, ಕಟ್ಟಿಗೆ ರಾಶಿ ಸುಟ್ಟುಕರಕಲಾಗಿದೆ.


ಪ್ರಾರಂಭದಲ್ಲಿ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಸುತ್ತಮುತ್ತಲಿನ ಪರಿಸರಕ್ಕೆ ವ್ಯಾಪಿಸಿದೆ. ಇದರಿಂದ  ರಾಜೀವನಗರದ ರತ್ನ್ ಆಚಾರ್ಯ ಅವರ ಹಡಿಲು ಗದ್ದೆಯ ಹುಲ್ಲು ಗಾವಲು, ಮನೆಯೊಂದರ ಬಳಿ ರಾಶಿ ಹಾಕಿದ್ದ ಕಟ್ಟಿಗೆಯ ರಾಶಿ, ಕಾಡಿನ ಅಕೇಶಿಯ ಮರಗಳು ಬೆಂಕಿಗೆ ಆಹುತಿಯಾಗಿವೆ. ಸುತ್ತಮುತ್ತ ಪರಿಸರದಲ್ಲಿ ಕೆಲಕಾಲ ದಟ್ಟ ಹೊಗೆ ಆವರಿಸಿಕೊಂಡಿತ್ತು.

ರಾಜೀವನಗರದ 6ನೇ ಅಡ್ಡ ರಸ್ತೆಯ ಬಳಿಯ ಎರಡು ಎಕರೆಯಷ್ಟು ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿದ್ದು, ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net