ರಾಜ್ಯ ಕ್ರೀಡಾಕೂಟಕ್ಕೆ ತಾಂತ್ರಿಕ ತೀರ್ಪುಗಾರರಾಗಿ ಮಂಚನಬಲೆ ಶ್ರೀನಿವಾಸ್ ಆಯ್ಕೆ

99
Published on

ಚಿಕ್ಕಬಳ್ಳಾಪುರ: ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತಾಂತ್ರಿಕ ತೀರ್ಪುಗಾರರಾಗಿ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಜ.17 ರಿಂದ ಜ.24 ರವರೆಗೆ ಮಂಗಳೂರು ಮತ್ತು ಉಡುಪಿಯಲ್ಲಿ ಕ್ರೀಡಾಕೂಟ ನಡೆಯಲಿದೆ. ಇದಕ್ಕೆ ಮಂಚನಬಲೆಯ ಕೆ.ಶ್ರೀನಿವಾಸ್ ನ್ನು ತಾಂತ್ರಿಕ ತೀರ್ಪುಗಾರರನ್ನಾಗಿ ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜು ಆಯ್ಕೆ ಮಾಡಿದ್ದಾರೆ. ಕಳೆದ 30 ವರ್ಷಗಳಿಂದಲೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ತೀರ್ಪುಗಾರರಾಗಿ ಶ್ರೀನಿವಾಸ್ ಸೇವೆ ಸಲ್ಲಿಸುತ್ತಿದ್ದಾರೆ.

*ಗ್ರಾಮೀಣ ಪ್ರತಿಭೆ

ಗ್ರಾಮೀಣ ಪ್ರತಿಭೆ ಮಂಚನಬಲೆ ಶ್ರೀನಿವಾಸ್ ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಅನೇಕ ಬಹುಮಾನಗಳನ್ನು ಗೆದ್ದುಕೊಂಡು ಬಂದಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಿಗೆ ನಿರಂತರವಾಗಿ ತರಬೇತಿಯನ್ನು ನೀಡಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳಕಿಗೆ ತರುತ್ತಿದ್ದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್, ಸರ್ ಎಂ.ವಿ.ಕ್ರೀಡಾಪಟುಗಳ ಸಂಘ ಸೇರಿದಂತೆ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ನೇತೃತ್ವ ವಹಿಸಿ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net