ವೀರಶೈವ ಸಂಘದಿಂದ ಮನವಿ

ಫೋಟೋ ಶೀರ್ಷಿಕೆ 12 ಸಿಆರ್_ಪಿ-3ಎ
Published on

ಚನ್ನರಾಯಪಟ್ಟಣ : ಮುಗ್ಧ ಅಭಿಮಾನಿಯನ್ನು ಕರೆಸಿಕೊಂಡು ಅಮಾನುಷವಾಗಿ ಹತ್ಯೆ ಮಾಡಿರುವ ಚಿತ್ರನಟ ದರ್ಶನ್ ಮತ್ತು ಆತನ ಬೆಂಬಲಿಗರಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ತಾಲೂಕು ವೀರಶೈವ ಸಮಾಜ ಮುಖಂಡರು ಬುಧವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಯುವಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು, ಕೂಡಿ ಹಾಕಿ ಹತ್ತಕ್ಕೂ ಹೆಚ್ಚು ಜನ ಥಳಿಸಿ ಕೊಲೆ ಮಾಡಿರುವುದು ಖಂಡನೀಯ. ಆರೋಪಿ ದರ್ಶನ ಮತ್ತಿತರರಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ನೊಂದ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವೀರಶೈವ ಸಮಾಜದ ಮುಖಂಡರು ತಹಸೀಲ್ದಾರ್‌ಗೆ ಮನವಿ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net