

ಗದಗ: ಬೀದಿ ಬದಿ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಣೆ ಮಾಡಲು ಟೆಂಡರ್ ಪ್ರಕ್ರಿಯೆ ಮಾಡುವಂತೆ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹೂವಿನ ವ್ಯಾಪಾರದ ಸಂಘದ ಅಧ್ಯಕ್ಷರಾದ ಉಮರ್ ಫಾರುಕ್ ಹುಬ್ಬಳ್ಳಿ, ರಾಜಖಾನ್ ಗುಲಾಬ್‌ಖಾನ್ ಪಠಾಣ ಹಣ್ಣು ಮತ್ತು ಕಿರುಕುಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಹೂವಿನ ವ್ಯಾಪಾರದ ಸಂಘದ ಅಧ್ಯಕ್ಷರಾದ ಉಮರ್ ಫಾರುಕ್ ಹುಬ್ಬಳ್ಳಿ ಬೀದಿ ಬದಿ ವ್ಯಾಪಾರಿಗಳನ್ನು ನಗರದಾದ್ಯಂತ ಈಗಾಗಲೇ ಗುರುತಿಸಲಾಗಿದೆ. ಆದರೆ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸಲು ಆದಾಯ ಬಹಳ ಅವಶ್ಯಕ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳಿಂದ ಶುಲ್ಕವನ್ನು ಕಾನೂನಾತ್ಮಕವಾಗಿ ಸಂಗ್ರಹಣೆ ಮಾಡುವುದು ಅವಶ್ಯವಾಗಿದೆ. ಕಾರಣ ಟೆಂಡರ್ ಪ್ರಕ್ರಿಯೆ ಮಾಡಿ ಗುತ್ತಿಗೆದಾರರನ್ನು ಆಯ್ಕೆ ಮಾಡಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಧ್ಯಕ್ಷರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಇನ್ನೂ ಮುಂದೆ ಯಾವುದೇ ಸಂಘಟನೆಯುವರು ಬೀದಿ ಬದಿ ವ್ಯಾಪಾರಿಗಳ ಹತ್ತಿರ ಹಣ ವಸೂಲಿ ಬಂದರೆ ನಗರಸಭೆ ದೂರು ನೀಡಿ ಅದರ ಬಗ್ಗೆ ನಗರಸಭೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹೂವಿನ ವ್ಯಾಪಾರದ ಸಂಘದ ಅಧ್ಯಕ್ಷರಾದ ಉಮರ್ ಫಾರುಕ್ ಹುಬ್ಬಳ್ಳಿ ರಾಜಖಾನ್ ಗುಲಾಬ್‌ಖಾನ್ ಪಠಾಣ ಹಣ್ಣು ಮತ್ತು ಕಿರುಕುಳ ಸಂಘದ ಅಧ್ಯಕ್ಷರು, ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಅನ್ವರ ಶಿರಹಟ್ಟಿ, ಅಮೀನ್‌ಸಾಬ್ ಧಾರವಾಡ, ಯಲ್ಲಪ್ಪ ಚಲವಾದಿ, ಅಜಮತ್ ಆಲದ್‌ಕಟ್ಟಿ, ರಾಜು ಶರೀಫ್ ನದಾಫ್, ವೆಂಕಟೇಶ್ ಬಿದರಿ ಉಪಸ್ಥಿತರಿದ್ದರು.