ನೋಟಿಸ್ ವಿರೋಧಿಸಿ ನಗರಸಭಾಧ್ಯಕ್ಷೆಗೆ ಮನವಿ

PTR_13 AUG_3
Published on

ಪುತ್ತೂರು: ಉದ್ಯಮ ಪರವಾನಿಗೆ ಊರ್ಜಿತ ಅವಧಿ ಮುಗಿದು ಸ್ಥಗಿತಗೊಳಿಸಿದ ಉದ್ಯಮದಾರರಿಗೆ ಶುಲ್ಕ ಹಾಗೂ ದಂಡನೆ ಶುಲ್ಕ ನೋಟಿಸ್ ನೀಡಿರುವ ಕ್ರಮವನ್ನು ವಿರೋಧಿಸಿ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮನವಿ ನೀಡಿದರು.

ಪುತ್ತೂರು ನಗರ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಪರವಾನಿಗೆ ಶುಲ್ಕವನ್ನು ವಸೂಲಿ ಬಾಕಿ ಎಂದು ಹಿಂದಿನ ಬಾಕಿಯ ಲಿಸ್ಟ್ ನಲ್ಲಿ ಸೇರಿಸಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈಗಾಗಲೇ ನಗರಸಭೆ ನೀಡಿರುವ ಶುಲ್ಕ ಬಾಕಿ ನೋಟಿಸನ್ನು ವಾಪಸ್ ಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಗರಸಭೆ ಸದಸ್ಯರಾದ ಶೈಲಾ ಪೈ, ರಿಯಾಜ್ ಪರ್ಲಡ್ಕ, ದಿನೇಶ್ ಕೆ.ಸೇವಿರೆ, ರೋಬಿನ್ ತಾವ್ರೋ, ನಾಮ ನಿರ್ದೇಶಕ ಸದಸ್ಯರಾದ ರೋಷನ್ ರೈ ಬನ್ನೂರು, ಶರೀಫ್ ಬಲ್ನಾಡ್, ಕಾಂಗ್ರೆಸ್ ಮುಖಂಡ ಮೌರಿಸ್ ಮಸ್ಕರೇನಿಯಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ ಪೂಜಾರಿ ಮೊಟ್ಟೆತಡ್ಕ, ಪದಾಽಕಾರಿಗಳಾದ ಇಸ್ಮಾಯಿಲ್ ಬೋಲ್ವಾರು, ವಿಲೆಡ್ ಫೆರ್ನಾಂಡಿಸ್ ಉರ್ಲಾಂಡಿ, ಬೆಳ್ಯಪ್ಪ ಪೂಜಾರಿ ಸೂತ್ರಬೆಟ್ಟು, ವಿಕ್ಟರ್ ಪಾಸ್, ಸಾಹಿರಬಾನು ಬನ್ನೂರು, ಹರೀಶ್ ಆಚಾರ್ಯ ಕೃಷ್ಣನಗರ, ಮುಕೇಶ್ ಕೆಮ್ಮಿಂಜೆ, ಸೂಫಿ ಬಪ್ಪಳಿಗೆ ಲೀನಾ ರೇಗೋ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net