ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಜಾಥಾ

31GDG04
ಗದಗ ನಗರದ ಗಾಂಧಿ ವೃತ್ತದಲ್ಲಿ ಕಾನೂನು ಮಹಾವಿದ್ಯಾಲಯ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ತಡೆ ಜಾಥಾ ಕಾರ್ಯಕ್ರಮ ಜರುಗಿತು. ಯು.ಎಚ್​. ವಗ್ಗರ, ಎಸ್​.ಐ. ಅನ್ಣಿಗೇರಿ, ಪಲ್ಲವಿ ಬುಯ್ಯರ, ಮಹಾತೆಂಶ ಕೊರಡಕೇರಿ, ವಿಶ್ವನಾಥ ಹಿರೇಮಠ ಇತರರು ಇದ್ದರು.
Published on

ಗದಗ: ಹುಲಕೋಟಿ ಸಹಕಾರಿ ಶಿಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ವತಿಯಿಂದ ಸೋಮವಾರ ನಗರದ ಗಾಂಧಿ ವೃತ್ತದ ಬಳಿ ವಿಶ್ವ ಮಾನವ ಕಳ್ಳ ಸಾಗಾಣಿಕೆಯ ತಡೆ ದಿನಾಚರಣೆ ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಬೆಟಗೇರಿ ಪಿಎಸ್​ಐ ಯು.ಎಚ್​. ವಗ್ಗರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಇರುವ ಕಾನೂನುಗಳ ಅರಿವನ್ನು ವಿದ್ಯಾಥಿರ್ಗಳಿಗೆ ಹಾಗೂ ಜನರಿಗೆ ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯತೆ ವಹಿಸಿದ ಮಹಾವಿದ್ಯಾಲಯದ ಉಪನ್ಯಾಸಕ ಎಸ್​.ಐ. ಅಣ್ಣಿಗೇರಿ ಮಾತನಾಡಿ, ಮಹಿಳೆಯ ಮೇಲೆ ಆಗುತ್ತಿರುವ ಶೋಷಣೆ ಹಾಗೂ ಮಕ್ಕಳ ಕಳ್ಳತನದ ಬಗ್ಗೆ ಮಾಹಿತಿ ನಿಡಿದರು. ಕಳ್ಳ ಸಾಗಾಣಿಕೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಮಾಹಾವಿದ್ಯಾಲಯ ಪ್ರಾಚಾರ್ಯ ಪಲ್ಲವಿ ಬುಯ್ಯರ ಮಾತನಾಡಿ, ಕರ್ನಾಟಕವನ್ನು ಮಾನವ ಕಳ್ಳ ಸಾಗಾಣಿಕೆಯಿಂದ ವಿಮುಕ್ತಿಗೊಳಿಸಲು, ಸಂಕಷ್ಟದಲ್ಲಿರುವ ಜನರನ್ನು ರಸಲು ಹಾಗೂ ಸಾಗಾಣಿಕೆಗೆ ಒಳಪಟ್ಟಿರುವರಿಗೆ ಸೂಕ್ತ ನ್ಯಾಯ ಒದಗಿಸಲು ಜನರು ಪೊಲೀಸ್​ ಇಲಾಖೆಗೆ ಸಹಕಾರ ನೀಡಬೇಕು ಎಂದರು. ಪ್ರತಿಜ್ಞಾ ವಿಧಿ ಬೋಧಿಸಿದರು.
ಮಹಾತೆಂಶ ಕೊರಡಕೇರಿ, ವಿಶ್ವನಾಥ ಹಿರೇಮಠ, ಡಿ. ಎಲ್​. ಕುಲಕಣಿರ್, ಸಂತೋಷ ಬಿಂಗಿ, ನೀತಾ ಮಲ್ಲಿಕಾರ್ಜುನ, ವಿ. ಎನ್​ ತಿಮ್ಮನಗೌಡ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net