ಮಾನಸ ಜಿ.ಶೆಟ್ಟಿಗೆ ಪಿಎಚ್‌ಡಿ ಪದವಿ

Bel_Manasa
Published on

ಬೆಳ್ತಂಗಡಿ: ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸ್‌ನ ಬಯೋಫಿಸಿಕ್ಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಮಾನಸ ಜಿ.ಶೆಟ್ಟಿ ಅವರ ಮಹಾಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ಸ್ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಬಯೋಫಿಸಿಕ್ಸ್ ವಿಭಾಗದ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ.ಬಬಿತಾ ಕೆ.ಎಸ್.ಮಾರ್ಗದರ್ಶನ ನೀಡಿದ್ದಾರೆ. ಇವರು ಉಡುಪಿ ಜಿಲ್ಲೆಯ ದೆಂದೂರು ಗ್ರಾಮದ ಸೂರಜ್ ಶೆಟ್ಟಿ ಅವರ ಪತ್ನಿ ಮತ್ತು ಉಜಿರೆ ಸಿದ್ದವನ ಸನ್ನಿಧಿಯ ಗಂಗಾಧರ ಶೆಟ್ಟಿ ಹಾಗೂ ವಸಂತಿ ಜಿ.ಶೆಟ್ಟಿ ಅವರ ಪುತ್ರಿ. ಉಜಿರೆಯ ಎಸ್‌ಡಿಎಂ ಕಾಲೇಜಿನ ಹಳೇ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ನೆದರ್‌ಲ್ಯಾಂಡ್ಸ್‌ನಲ್ಲಿ ನೆಲೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net