ಟೆಕ್ವಾಂಡೋದಲ್ಲಿ ಮನಗುಂಡಿ ಶಾಲಾ ಮಕ್ಕಳ ಸಾಧನೆ

23 Dwd 4
Published on

ಧಾರವಾಡ: ತಾಲೂಕಿನ ಮನಗುಂಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ದೀಪಕ ಮಾರಡಗಿ, ಪ್ರೀತಿ ಹುತ್ತಕ್ಕನವರ, ನಿರ್ಮಲಾ ಬೆಳ್ಳಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಸವಣ್ಣೆಪ್ಪ ಕುರುಬರ, ಮಹೇಶ ಗುಂಡಗೋವಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಗೊರವರ ಮಾರ್ಗದರ್ಶನ ನೀಡಿದ್ದರು. ಮಕ್ಕಳ ಸಾಧನೆಗೆ ಎಸ್‌ಡಿಎಸಿ ಅಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net