ಮನಗೂಳಿ ಪಪಂ ಅಧ್ಯಕ್ಷ ಡಾ. ಮೇತ್ರಿ, ಉಪಾಧ್ಯಕ್ಷ ಬಿರಾದಾರ

Managooli PAPAM President Dr. Maitri, Vice President Biradar
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಪಂ ಅಧ್ಯಕ್ಷರಾಗಿ ಡಾ. ಮಳಸಿದ್ದಪ್ಪ ಮೇತ್ರಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೇಕಪ್ಪಗೌಡ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಪ.ಪಂ. ಸದಸ್ಯರಾದ ತೇಜಸ್ವಿನಿ ರಜಪೂತ, ರಮೇಶ ಹಾರಿವಾಳ, ಶಂಕರ ಶಿವಮತ, ಪ್ರದೀಪ ಜಾನಕರ, ಭಾಗ್ಯರಾಜ ಸೊನ್ನದ ಇತರರಿದ್ದರು.
Published on

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಡಾ. ಮಳಸಿದ್ದಪ್ಪ ಮೇತ್ರಿ ಹಾಗೂ ಉಪಾಧ್ಯಕ್ಷರಾಗಿ ಶೇಕಪ್ಪಗೌಡ ಬಿರಾದಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಯಮನಪ್ಪ ಸೋಮನಕಟ್ಟಿ ಘೋಷಿಸಿದರು.

ಮನಗೂಳಿ ಪಪಂ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆ ಮಾಡಿದರು. ಒಟ್ಟು 16 ಸದಸ್ಯರ ಪಪಂಗೆ ಅಧ್ಯಕ್ಷ ಸ್ಥಾನಕ್ಕೆ ಡಾ.ಮಳಸಿದ್ದಪ್ಪ ಮೇತ್ರಿ ಹಾಗೂ ಎಂ.ಎ. ದಳವಾಯಿ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ದಳವಾಯಿಗೆ 4 ಸದಸ್ಯರು ಕೈ ಎತ್ತಿದರೆ, ಡಾ. ಮಳಸಿದ್ದಪ್ಪ ಮೇತ್ರಿ ಪರ 12 ಸದಸ್ಯರು ಕೈ ಎತ್ತುವ ಮೂಲಕ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಶೇಕಪ್ಪಗೌಡ ಬಿರಾದಾರ ಹಾಗೂ ನೀಲಾಬಾಯಿ ಗುಜಗೊಂಡ ನಾಮಪತ್ರ ಸಲ್ಲಿಸಿದ್ದರು. ನೀಲಾಬಾಯಿ ಪರ 4 ಸದಸ್ಯರು ಕೈ ಎತ್ತಿದರೆ, ಶೇಕಪ್ಪಗೌಡ ಪರ 12 ಸದಸ್ಯರು ಕೈ ಎತ್ತಿದ್ದರಿಂದಾಗಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣಾ ಸಹಾಯಕ ಅಧಿಕಾರಿ ಎಂ. ಎಸ್. ಜಾಗಿರದಾರ, ವಿಷಯ ನಿರ್ವಾಹಕ ಐ. ಸಿ. ಇಂಗಳಿ, ಸಹಾಯಕರಾಗಿ ಅನಿಲ ಅವಟಿ ಕಾರ್ಯ ನಿರ್ವಹಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಪ.ಪಂ. ಸದಸ್ಯರಾದ ತೇಜಸ್ವಿನಿ ರಜಪೂತ, ರಮೇಶ ಹಾರಿವಾಳ, ಶಂಕರ ಶಿವಮತ, ಪ್ರದೀಪ ಜಾನಕರ, ಭಾಗ್ಯರಾಜ ಸೊನ್ನದ, ರಾಮಚಂದ್ರ ಮುದ್ದಾಪುರ(ಪತ್ತಾರ), ಮುತ್ತವ್ವ ಖ್ಯಾತನ್ನವರ, ಸತ್ಯವ್ವ ಗಣಿ, ಸಲೀಂ ಮಕಾನದಾರ, ಪ್ರಕಾಶ ಮನಗೂಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net