ಚಿನ್ನದ ಸರ ಮರಳಿಸಿದ ನಿರ್ವಾಹಕ

Manager who returned the gold chain
ಬಾಗಲಕೋಟೆ ನಗರದಲ್ಲಿ ಭಾನುವಾರ ಡಾ.ಪ್ರಸನ್ನ ರೆಡ್ಡಿ ಅವರಿಗೆ ಬಾಗಲಕೋಟೆ ಘಟಕದ ವ್ಯವಸ್ಥಾಪಕ ಎ.ಎ.ಕೋರಿ ಚಿನ್ನದ ಸರ ಹಸ್ತಾಂತರ ಮಾಡಿದರು. ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.
Published on


ಬಾಗಲಕೋಟೆ: ಹೈದರಾಬಾದ್-ಬೆಳಗಾವಿ ಮಾರ್ಗದ ಕೆಎ.22 ಎಫ್2080 ಬಸ್‌ನಲ್ಲಿ ಮಾ.9 ರಂದು ಪ್ರಯಾಣ ಬೆಳೆಸಿದ್ದ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರವನ್ನು ನಿರ್ವಾಹಕ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಡಾ.ಪ್ರಸನ್ನ ರೆಡ್ಡಿ ಅವರು ಇದೇ ಬಸ್‌ನಲ್ಲಿ ಪ್ರಯಾಣ ಬೆಳೆಸಿ ಬಾಗಲಕೋಟೆ ನಿಲ್ದಾಣದಲ್ಲಿ ಇಳಿದಿದ್ದರು. ಅವರು ಮನೆಗೆ ಹೋಗಿ ನೋಡಿದಾಗ ತಮ್ಮ ಕೊರಳಲ್ಲಿದ್ದ ಅಂದಾಜು 1.2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಾಣೆಯಾಗಿತ್ತು.

ಬಸ್ ಬೆಳಗಾವಿ ತಲುಪಿದಾಗ ನಿರ್ವಾಹಕ ಪರಶುರಾಮ ಮಾದರ ಆಸನ ಪರಿಶೀಲಿಸುವಾಗ ಚಿನ್ನದ ಸರ ಸಿಕ್ಕಿತ್ತು. ನಂತರ ಬಾಗಲಕೋಟೆ ಘಟಕದ ವ್ಯವಸ್ಥಾಪಕ ಎ.ಎ.ಕೋರಿ ಅವರಿಗೆ ಹಸ್ತಾಂತರ ಮಾಡಿದ್ದರು. ಭಾನುವಾರ ಡಾ.ಪ್ರಸನ್ನ ರೆಡ್ಡಿ ಅವರಿಗೆ ಸಾರಿಗೆ ಸಿಬ್ಬಂದಿ ಚಿನ್ನದ ಸರ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net