ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕಂದಾಯ ಇಲಾಖೆ ನಿವೃತ್ತ ಅಧಿಕಾರಿಗೆ ವಂಚನೆ

Cibra
Published on

ರಟ್ಟಿಹಳ್ಳಿ: ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬ್ಯಾಂಕ್ ವ್ಯವಹಾರದ ಸಮಸ್ಯೆ ಬಗೆಹರಿಸುವ ನೆಪದಲ್ಲಿ ನಿವೃತ್ತ ಕಂದಾಯ ಅಧಿಕಾರಿಯೊಬ್ಬರಿಗೆ 90 ಸಾವಿರ ರೂ. ಮೋಸ ಮಾಡಿದ ಕುರಿತು ಇಲ್ಲಿಯ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕೋಡಿಹಳ್ಳಿಯ ಕಂದಾಯ ಇಲಾಖೆ ನಿವೃತ್ತ ಅಧಿಕಾರಿ ಬಸವಣೆಪ್ಪ ನಾಗಪ್ಪ ತಾವರಗಿ ಮೋಸ ಹೋದವರು.
ಇವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಹಿರೇಕೆರೂರ ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಂತರ ನಿಮ್ಮ ಬ್ಯಾಂಕ್ ವ್ಯವಹಾರದ ಸಮಸ್ಯೆ ಬಗೆಹರಿಸಲು ನಿಮ್ಮ ಪಾಸ್‌ಬುಕ್ ಫೋಟೋ ಹೊಡೆದು ಕಳುಹಿಸಿ ಎಂದು ಹೇಳಿದ್ದಾರೆ. ಅದರಂತೆ ಬಸವಣೆಪ್ಪ ಪಾಸ್‌ಬುಕ್ ಫೋಟೋ ಕಳುಹಿಸಿದ್ದಾರೆ. ಆಗ ಇವರ ಮೊಬೈಲ್‌ಗೆ ಬಂದ ಒಟಿಪಿ ನಂಬರ್ ಕೂಡ ಹೇಳಿದ್ದಾನೆ. ಆಗ ಆರೋಪಿಯು 90 ಸಾವಿರ ರೂ. ಅವರ ಖಾತೆಯಿಂದ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net