

ಮಂಗಳೂರು: ಕರಾವಳಿ ಜಿಲ್ಲೆಗಳ ವಾತಾವರಣದಲ್ಲಿ ಉಷ್ಣಾಂಶ ತೀವ್ರ ರೀತಿಯಲ್ಲಿ ಏರಿಕೆಯಾಗಿದೆ.
ದ.ಕ.ಜಿಲ್ಲೆಯ ಮಂಗಳೂರು, ಮೂಡುಬಿದಿರೆ ತಾಲೂಕುಗಳನ್ನು ಸಾಮಾನ್ಯ ಬರಪೀಡಿತ ಎಂದು ಘೋಷಿಸಲಾಗಿದೆ. ಉಷ್ಣಾಂಶದ ಏರಿಕೆಯೊಂದಿಗೆ ಬದಲಾದ ವಾತಾವರಣ ಎಲ್ಲ ಪ್ರಾಣಿ-ಪಕ್ಷಿ, ವಿಶೇಷವಾಗಿ ಉತ್ಪಾದಕ ಪ್ರಾಣಿಗಳಾದ ದನ ಹಾಗೂ ಮಾಂಸ ಕೋಳಿಗಳ ಮೇಲೆ ಪರಿಣಾಮ ಬೀರಿದೆ.
ಈ ಹಿನ್ನೆಲೆಯಲ್ಲಿ ಜಾನುವಾರು, ಕೋಳಿ ಪಾಲನೆ ಸಂದರ್ಭ ಸೂಕ್ತ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಪಶುಪಾಲನಾ ಮತ್ತು ವಶುವೈದ್ಯಕೀಯ ಸೇವಾ ಇಲಾಖೆ ದಕ್ಷಿಣ ಕನ್ನಡ ಉಪನಿರ್ದೇಶಕರು (ಆಡಳಿತ) ಸಲಹೆ ನೀಡಿದ್ದಾರೆ. ಬೇಸಗೆ ಅವಧಿಯಲ್ಲಿ ಉಷ್ಣಾಂಶ ಒತ್ತಡದಿಂದ ದನಗಳು ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗಿ, ಹಾಲಿನ ಇಳುವರಿ ಕಡಿಮೆಯಾಗುತ್ತದೆ ಅಥವಾ ಹೆಚ್ಚಿನ ಬಿಸಿಲಿನ ತಾಪಮಾನದಿಂದ ಸಾಯುವ ಸಾಧ್ಯತೆ ಇರುತ್ತದೆ. ಮಾಂಸದ ಕೋಳಿಗಳು ಆಹಾರ ತಿನ್ನುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ, ಮಾಂಸದ ಕೋಳಿಗಳ ತೂಕ ಇಳಿಕೆ ಸಾಧ್ಯತೆ ಇದೆ, ಉಷ್ಣಾಂಶದ ಪ್ರಮಾಣ 36 ಡಿಗ್ರಿಗಿಂತ ಹೆಚ್ಚಾದಾಗ ಕೋಳಿಗಳು ಸಾಯಲಾರಂಭಿಸುತ್ತವೆ. ಉಷ್ಣಾಂಶದ ಒತ್ತಡದಲ್ಲಿ ಬಳಲಿದ ಪ್ರಾಣಿ-ಪಕ್ಷಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ದನಗಳಲ್ಲಿ ಕೆಚ್ಚಲು ಬಾವು, ಕೋಳಿಗಳಲ್ಲಿ ಕೊಕ್ಕರೆ ರೋಗಗಳು ಕಂಡುಬರುತ್ತವೆ. ರೈತರು ಮತ್ತು ಕೋಳಿ ಸಾಕಾಣಿಕೆದಾರರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿ ಸುವುದರಿಂದ ಆಗಬಹುದಾದ ಆರ್ಥಿಕ ನಷ್ಟ ತಪ್ಪಿಸಬಹುದು ಎಂದು ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುನ್ನೆಚ್ಚರಿಕೆ ಕ್ರಮ:
ಮಾಂಸದ ಕೋಳಿಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮ