

ಬೆಟ್ಟದಪುರ: ಹಸು ತೊಳೆಯಲು ಹೋಗಿ ಕಾಲುವೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಮೀಪದ ಕುಡುಕೂರು ಗ್ರಾಮದ ನಿವಾಸಿ ಹನುಮಂತ (28) ಮೃತಪಟ್ಟಿದ್ದಾರೆ.
ಗ್ರಾಮದಲ್ಲಿಯೇ ವ್ಯವಸಾಯ ಮಾಡಿಕೊಂಡು ಪಾಲಕರೊಂದಿಗೆ ವಾಸವಿರುವ ಹನುಮಂತ, ಅ.29ರಂದು ಹಸು ತೊಳೆಯಲು ಹೋಗಿದ್ದು, ಮಗ ಮನೆಗೆ ಹಿಂದಿರುಗಿ ಬಾರದ ಕಾರಣ ಪಾಲಕರು ಎಲ್ಲ ಕಡೆ ಹುಡುಕಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮದ ಬಸವೇಶ್ವರ ದೇಗುಲದ ಬಳಿ ಹಾದುಹೋಗಿರುವ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮೃತನ ತಂದೆ ಕೃಷ್ಣಯ್ಯ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.