ಒಡಿಶಾ ಯುವತಿಯ ಮೇಲೆ ಫೈರಿಂಗ್​ ಮಾಡಿದ್ದ ಯುವಕನಿಂದ ಆತ್ಮಹತ್ಯೆಗೆ ಪ್ರಯತ್ನ

death
Published on

ಬೆಂಗಳೂರು: ನಿನ್ನೆ (ಫೆ.25) ಸಂಜೆ ನಗರದ ಮಾರತ್​ಹಳ್ಳಿ ಔಟರ್​ ರಿಂಗ್​ ರೋಡ್​ ಬಳಿ ಒಡಿಶಾ ಮೂಲದ ಯುವತಿಯ ಮೇಲೆ ಫೈರಿಂಗ್​ ಮಾಡಿದ್ದ ಯುವಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ.

ನಿನ್ನೆ ಸಂಜೆ 6 ಗಂಟೆಯ ಸಮಯಕ್ಕೆ ಅಮರೇಂದ್ರ ಪಾಟ್ನಾಯಕ್​ ಹೆಸರಿನ ಟೆಕ್ಕಿ ಒಡಿಶಾ ಮೂಲದ ಶುಭಶ್ರೀ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ಅಲ್ಲಿಂದ ಕಾಲ್ಕಿತ್ತಿದ್ದ ಆತ ಸಂಜೆ 7.40ರ ಸುಮಾರಿಗೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ.

ಟೆಕ್ಕಿ ಅಮರೇಂದ್ರನನ್ನು ಪೊಲೀಸರು ಪತ್ತೆ ಹಚ್ಚಿದಾಗ ಆತನ ದೇಹದಲ್ಲಿ ಅಪಘಾತದ ವೇಳೆ ಸಂಭವಿಸುವ ಗಾಯಗಳು ಮತ್ತು ಸ್ವಯಂಪ್ರೇರಿತವಾಗಿ ಮಾಡಿಕೊಂಡಿರುವ ಗಾಯಗಳು ಕಂಡಿವೆ. ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯಗಳು ಕಾಣಿಸಿಕೊಂಡಿದ್ದು ಸದ್ಯ ಆತನಿಗೆ ಶುಭಾಶ್ರೀಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಸ್ಥಳದಲ್ಲಿ ಒಂದು ನೋಟ್​ ಬುಕ್​ ಪತ್ತೆಯಾಗಿದ್ದು ಅದರಲ್ಲಿ 17 ಪುಟಗಳಲ್ಲಿ ಅಮರೇಂದ್ರ ಡೆತ್​ ನೋಟ್​ ಮಾದರಿಯ ಜೊತೆ ಕೊನೆ ಶುಭಾಶಯ ಬರೆದಿರುವುದು ಬೆಳಕಿಗೆ ಬಂದಿದೆ.

ಮಾರತಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net