12 ವರ್ಷದಿಂದ ತಲೆಮರೆಸಿಕೊಂಡಿದ್ದವನ ಬಂಧನ

YLP ARREST
Published on

ಯಲ್ಲಾಪುರ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತಿನಲ್ಲಿ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಗುಜರಾತ ರಾಜ್ಯದ ದಾಹೋಡನ ಮಹಮ್ಮದ್ ರಫೀಕ್ ಬಬ್ಬನ್​ಖಾನ್ ಮೇವಾದಿ ಬಂಧಿತ.

ಪ್ರಕರಣವೊಂದರ ಆರೋಪಿಯಾಗಿರುವ ಈತ ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನನ್ನು ಗುಜರಾತಿನ ದಾಹೋಡನಲ್ಲಿ ಯಲ್ಲಾಪುರ ಪಿಎಸ್​ಐ ಸಿದ್ದಪ್ಪ ಗುಡಿ, ಸಿಬ್ಬಂದಿ ಮಹಮ್ಮದ್ ಶಫಿ, ಗಿರೀಶ ಲಮಾಣಿ ಹಾಗೂ ಪರಶುರಾಮ ದೊಡ್ಡಮನಿ ಅವರ ತಂಡ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net