ಅಬ್ಬಬ್ಬಬ್ಬಾ... ಏನ್ ತಲೆ ಕಣ್ರೀ, ಇದ್ರಲ್ಲೂ ಮಾಸ್ಕ್ ಮಾಡ್ಕೋತಾರಾ?

tengu mask
Published on

ಸೊರಬ: ಕರೊನಾ ಸೋಂಕು ತಗುಲದಂತೆ ಬಳಸುವ ಮಾಸ್ಕ್‌ಗಳಲ್ಲಿ ಹಲವಾರು ವಿಧಗಳಿವೆ. ತ್ರೀ ಫೋಲ್ಡೆಡ್ ಮಾಸ್ಕ್, ಎನ್-95 ಮಾಸ್ಕ್‌ಗಳ ಜತೆಗೆ ಮ್ಯಾಚಿಂಗ್ ಮಾಸ್ಕ್‌ಗಳೂ ಮಾರುಕಟ್ಟೆಗೆ ಬಂದಿವೆ. ಬಹುಶಃ ಈಗ ನೀವು ನೋಡುತ್ತಿರುವ ಮಾಸ್ಕ್ ವಿಶ್ವದಲ್ಲೇ ಬಂದಿರಲಿಕ್ಕಿಲ್ಲ! ಹೌದು, ಇದು ತೆಂಗಿನ ಕರಟದ ಮಾಸ್ಕ್.

ಸೊರಬ ಪಟ್ಟಣದಲ್ಲಿ ನಾಗರಾಜ್ ಎಂಬುವವರು ತೆಂಗಿನಕಾಯಿ ಕರಟದಿಂದ (ಚಿಪ್ಪು) ಮಾಸ್ಕ್ ಮಾಡಿಕೊಂಡಿದ್ದಾರೆ. ಬುಧವಾರ ಸೊರಬ ಮಾರುಕಟ್ಟೆಯಲ್ಲಿ ಅವರು ತೆಂಗಿನ ಕರಟವನ್ನು ಮಾಸ್ಕ್‌ನಂತೆ ವ್ಯವಸ್ಥಿತವಾಗಿ ದಾರದಿಂದ ಕಟ್ಟಿ ಮುಖಕ್ಕೆ ಧರಿಸಿ ಛತ್ರಿ ಹಿಡಿದು ಮಳೆಯಲ್ಲಿ ಓಡಾಡುತ್ತಿದ್ದರು. ಅವರನ್ನು ನೋಡಿದ ಜನರಿಗೆಲ್ಲ ಅಚ್ಚರಿಯೋ ಅಚ್ಚರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net