ಫ್ರೆಂಡ್ಸ್​ ಜತೆ ಕಪಲ್​ ಸೆಕ್ಸ್ ಮಾಡು ಎಂದು ಒತ್ತಾಯ ಮಾಡ್ತಿದ್ದ ಗಂಡ! ಪಾಪಿ ಪತಿಯ ಟಾರ್ಚರ್​ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಹೆಂಡತಿ

crime
Published on

ಬೆಂಗಳೂರು: ಜೀವನದುದ್ದಕ್ಕೂ ಜತೆಯಿರುವ ಆಣೆ ಮಾಡಿ ಮದುವೆಯಾಗಿದ್ದ ಹೆಂಡತಿಗೆ ಗಂಡನೇ ಕಪಲ್​ ಸೆಕ್ಸ್ ಮಾಡು ಎಂದು ಗೋಳಿಟ್ಟಿದ್ದ ಎನ್ನುವ ವಿಚಿತ್ರ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಗಂಡನ ಕಿರುಕುಳ ತಾಳಲಾರದ ಹೆಂಡತಿ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಆತನ ವಿರುದ್ಧ ದೂರು ನೀಡಿದ್ದಾಳೆ.

ಬೆಂಗಳೂರಿನ ಶಿವಾಜಿನಗರ ನಿವಾಸಿ ವಸೀಂ ಶರೀಫ್ ಆರೋಪಿ ಸ್ಥಾನದಲ್ಲಿರುವ ಪತಿರಾಯ. ಈತ 2018ರಲ್ಲಿ ದೂರುದಾರ ಮಹಿಳೆಯನ್ನು ಮದುವೆಯಾಗಿದ್ದ. ಅದಾದ ನಂತರ ಗೋವಾಕ್ಕೆ ಕರೆದುಕೊಂಡು ಹೋಗಿ ನನ್ನೊಂದಿಗೆ ಮದ್ಯಪಾನ ಮಾಡು ಎಂದು ಒತ್ತಾಯಿಸಿದ್ದ. ಅದಕ್ಕೆ ಮಹಿಳೆ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಅದಾದ ನಂತರ ಫ್ಯಾಮಿಲಿ ಟ್ರಿಪ್​ ಎಂದು ಊಟಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ನನ್ನ ಸ್ನೇಹಿತರೊಂದಿಗೆ ನೀನು ಖಾಸಗಿ ಹೋಟೆಲ್​ನಲ್ಲಿ ಕಪಲ್ ಸೆಕ್ಸ್​ ಮಾಡಬೇಕು ಎಂದು ಹೇಳಿ ಪೀಡಿಸಿದ್ದ. ನಾನು ನನ್ನ ಸ್ನೇಹಿತರ ಹೆಂಡತಿಯರ ಜತೆ ಸೆಕ್ಸ್​ ಮಾಡುತ್ತೇನೆ. ಅದೇ ರೀತಿ ನೀನು ನನ್ನ ಸ್ನೇಹಿತರ ಜತೆ ಸೆಕ್ಸ್ ಮಾಡಬೇಕು ಎಂದು ಹಿಂಸೆ ಕೊಟ್ಟಿದ್ದ.

ಮಹಿಳೆ ಈ ಹಿಂದೆ ಎರಡು ಬಾರಿ ಗರ್ಭವತಿ ಆಗಿದ್ದಳು. ಆಗ ಆಕೆಯ ಮೇಲೆ ಷರೀಫ್​ ಹಲ್ಲೆ ಮಾಡಿದ್ದರಿಂದಾಗಿ ಆಕೆಗೆ ಅಬಾಷನ್​ ಆಗಿದ್ದಾಗಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಹಾಗೆಯೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ತಾಯಿ ಮಗು ಇಬ್ಬರನ್ನೂ ಸರಿಯಾಗಿ ನೋಡಿಕೊಂಡಿಲ್ಲ ಎನ್ನುವ ಆರೋಪವನ್ನೂ ಮಾಡಲಾಗಿದೆ. ಈ ವಿಚಿತ್ರ ಪತಿರಾಯನ ವಿರುದ್ಧ ಶಿವಾಜಿನಗರ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net