

Wedding Party: ಮದುವೆಯ ನಂತರದ ಭೋಜನಕೂಟದಲ್ಲಿ ಹೆಚ್ಚುವರಿ ಚಿಕೆನ್ ಬೇಡಿಕೆಯ ಇಟ್ಟಿದ್ದಕ್ಕಾಗಿ 30 ವರ್ಷದ ವ್ಯಕ್ತಿಯನ್ನು ಇರಿದು ಕೊಂದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬಲಿಯಾದ ವಿನೋದ್ ಮಲಶೆಟ್ಟಿ, ಯರಗಟ್ಟಿ ತಾಲೂಕಿನವರಾಗಿದ್ದು, ಇತ್ತೀಚೆಗೆ ವಿವಾಹವಾದ ಅವರ ಸ್ನೇಹಿತ ಅಭಿಷೇಕ್ ಕೊಪ್ಪದ್ ಆಯೋಜಿಸಿದ್ದ ಭೋಜನಕೂಟದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಭಾನುವಾರ ಅಭಿಷೇಕ್ ಅವರ ಜಮೀನಿನಲ್ಲಿ ಪಾರ್ಟಿ ನಡೆದಿತ್ತು.
ವಿನೋದ್ ಊಟವನ್ನು ಬಡಿಸುತ್ತಿದ್ದ ವಿಠಲ್ ಹರುಗೋಪ್ ಅವರಿಂದ ಹೆಚ್ಚಿನ ಕೋಳಿ ಮಾಂಸವನ್ನು ಕೇಳಿದರು. ಇದು ನಂತರ ವಿವಾದಕ್ಕೆ ಕಾರಣವಾಗಿ ವಿನೋದ್ ಮತ್ತು ವಿಠಲ್ ನಡುವೆ ವಾಗ್ವಾದ ನಡೆಯಿತು. ಇದರಿಂದ ಕೋಪಗೊಂಡ ವಿಠಲ್, ಈರುಳ್ಳಿ ಕತ್ತರಿಸಲು ಬಳಸುವ ಅಡುಗೆ ಚಾಕುವಿನಿಂದ ವಿನೋದ್‌ಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)